Bandipur, ಮಾರ್ಚ್ 29 -- ಬಂಡೀಪುರ ಹುಲಿ ಅಭಯಾರಣ್ಯದ ಮಧ್ಯಭಾಗವನ್ನು ಹಾದು ಹೋಗುವ ರಾಷ್ಟ್ರೀಯ 766 ರಲ್ಲಿ ರಾತ್ರಿ 9 ರಿಂದ ಬೆಳಿಗ್ಗೆ 6 ರವರೆಗೆ ರಾತ್ರಿ ಸಂಚಾರ ನಿಷೇಧವನ್ನು ರದ್ದುಗೊಳಿಸಲು ಕರ್ನಾಟಕ ಕಾಂಗ್ರೆಸ್‌ ಸರ್ಕಾರದ ಒತ್ತಡ ಜೋರಾಗಿರುವ ಚರ್ಚೆ ನಡೆದಿದೆ.

ಡೀಪುರ ರಾತ್ರಿ ಸಂಚಾರ ನಿರ್ಬಂಧ ವಿಷಯ ಅತ್ಯಂತ ಸೂಕ್ಷ್ಮವಾಗಿದ್ದು, ಮುಖ್ಯಮಂತ್ರಿಯವರೊಂದಿಗೆ ಸಮಾಲೋಚಿಸಿ, ಕಾನೂನು ತಜ್ಞರ ಅಭಿಪ್ರಾಯ ಪಡೆದು ಸರ್ವಸಮ್ಮತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ತಿಳಿಸಿರುವುದು ಚರ್ಚೆ ಹುಟ್ಟು ಹಾಕಿದೆ.

ಬಂಡೀಪುರ ಮಾರ್ಗದಲ್ಲಿ ಹುಲಿಯಂತ ಪ್ರಾಣಿಯೂ ಅಪಘಾತಕ್ಕೆ ಜೀವ ಕಳೆದುಕೊಂಡಿವೆ. ಈ ಕಾರಣದಿಂದಲೇ ಸುಪ್ರೀಂ ಕೋರ್ಟ್ 2019 ರಲ್ಲಿ ರಾಷ್ಟ್ರೀಯ ಹೆದ್ದಾರಿ 766 ರಲ್ಲಿ ರಾತ್ರಿ ಸಂಚಾರವನ್ನು ನಿಷೇಧಿಸಿತ್ತು. ತಮಿಳುನಾಡು ಹಾಗೂ ಕೇರಳಕ್ಕೆ ರಾತ್ರಿ ವಾಹನ ಸಂಚಾರ ಇಲ್ಲ.

ಬಂಡೀಪುರದಿಂದ ಕೇರಳ ಹಾಗೂ ಊಟಿಗೆ ಹೋಗುವ ಮಾರ್ಗದಲ್ಲಿ ವನ್ಯಜೀವಿ ಸಂತತಿ ದಟ್ಟವಾಗಿದೆ.ಹಗಲು...