Bengaluru, ಜನವರಿ 26 -- ಬಾಳೆಹಣ್ಣು ತಿನ್ನಲು ಮಾತ್ರವಲ್ಲ, ನಿಮ್ಮ ಸೌಂದರ್ಯದಲ್ಲೂ ಅದರ ಪಾತ್ರ ದೊಡ್ಡದಿದೆ. ಬಾಳೆಹಣ್ಣಿನಲ್ಲಿ ವಿಟಮಿನ್, ಆರ್ಗಾನಿಕ್ ಆಯಿಲ್, ಖನಿಜದ ಆಂಶಗಳು ಹೇರಳವಾಗಿರುತ್ತವೆ. ಅವುಗಳು ನಿಮ್ಮ ತಲೆಕೂದಲಿಗೆ ಹೊಳಪು, ನಯವಾದ ರೂಪವನ್ನು ನೀಡುತ್ತವೆ. ಹೀಗಾಗಿ ಬಾಳೆಹಣ್ಣು ಹೊಟ್ಟೆಗೆ ಮಾತ್ರವಲ್ಲ, ತಲೆಕೂದಲಿಗೂ ಹಿತವಾಗಿರುತ್ತದೆ. ಬಾಳೆಹಣ್ಣಿನಿಂದ ತಯಾರಿಸಿದ ಹೇರ್ ಮಾಸ್ಕ್, ಸರಳ ಮತ್ತು ಕಡಿಮೆ ಖರ್ಚಿನಲ್ಲಿ ಮನೆಯಲ್ಲೇ ತಯಾರಿಸಬಹುದಾದ ಹೇರ್ ಮಾಸ್ಕ್ ಆಗಿದೆ.

ನಗರಗಳಲ್ಲಿ ಬೋರ್‌ವೆಲ್ ಮತ್ತು ಗೀಸರ್ ನೀರಿನ ಸಮಸ್ಯೆಯಿಂದ ತಲೆಕೂದಲು ಉದುರುವುದು ಸಾಮಾನ್ಯ ಸಂಗತಿಯಾಗಿದೆ. ಜತೆಗೆ ಒತ್ತಡದ ಕೆಲಸ, ಜೀವನಶೈಲಿ, ಚಿಂತೆಯೂ ತಲೆಕೂದಲಿನ ಆರೋಗ್ಯದ ಮೇಲೆ ಪ್ರಭಾವ ಬೀರುತ್ತದೆ. ಹೀಗಾಗಿ ತಲೆಕೂದಲನ್ನು ಆರೋಗ್ಯವಾಗಿ ಇಟ್ಟುಕೊಳ್ಳುವುದು ಒಂದು ಸವಾಲಿನ ಸಂಗತಿಯಾಗಿದೆ. ಅದರಲ್ಲೂ ಮಾರುಕಟ್ಟೆಗಳಲ್ಲಿ ದೊರೆಯುವ ವಿವಿಧ ರೀತಿಯ ಕಂಪನಿಗಳ ರಾಸಾಯನಿಕ ಸಹಿತ ಶಾಂಪೂ, ಕಂಡೀಶನರ್ ಬಳಸಿ ಕೂದಲಿನ ಆರೈಕೆ ಮಾಡಿದರೂ ನಿರೀಕ್ಷಿತ ಪರಿ...