Bagalkot, ಮಾರ್ಚ್ 4 -- Bagalkot Holi 2025: ಕರ್ನಾಟಕದಲ್ಲಿಯೇ ವಿಭಿನ್ನ ಹಾಗೂ ಸುಧೀರ್ಘ ಹೋಳಿ ಆಚರಣೆಗೆ ಹೆಸರುವಾಸಿಯಾಗಿರುವ ಉತ್ತರ ಕರ್ನಾಟಕದ ಹಿನ್ನೀರ ನಗರಿ ಬಾಗಲಕೋಟೆಯಲ್ಲಿ ಈ ವರ್ಷದ ಹೋಳಿ ಹಬ್ಬಕ್ಕೆ ವೇದಿಕೆ ಸಿದ್ದವಾಗುತ್ತಿದೆ. ಕಾಮದಹನದೊಂದಿಗೆ ಹಬ್ಬ ಆಚರಿಸಲು ಊರು ಅಣಿಯಾಗುತ್ತಿದೆ. ಸತತ ಆರು ದಿನಗಳ ಕಾಲ ಬಾಗಲಕೋಟೆ ನಗರದ ಎಲ್ಲಾ ಭಾಗಗಳಲ್ಲೂ ಹೋಳಿ ಹಬ್ಬ ಆಚರಣೆ ಮಾಡುವುದಕ್ಕೆ ತಯಾರಿ ನಡೆದಿದೆ. ಈಗಾಗಲೇ ಅಮಾವಾಸ್ಯೆಯ ಮರು ದಿನದಿಂದಲೇ ಬಾಗಲಕೋಟೆಯಲ್ಲಿ ಹಲಗೆ ಸದ್ದು ಶುರುವಾಗಿದೆ. ಹಲಗೆಯ ಮೂಲಕ ಇಡೀ ಊರಲ್ಲಿ ಹೋಳಿ ಹಬ್ಬ ಮತ್ತೆ ಬರುತ್ತಿದೆ ಎಂದು ಸಾರುವ ಪ್ರಯತ್ನವೂ ನಡೆದಿದೆ. ಇದರೊಟ್ಟಿಗೆ ಆರು ದಿನಗಳಲ್ಲಿ ಎಲ್ಲೆಲ್ಲಿ ಹೋಳಿ ಹಬ್ಬ ಹೇಗಿರಲಿದೆ ಎನ್ನುವ ಪಟ್ಟಿಯನ್ನೂ ಅಂತಿಮಗೊಳಿಸಲಾಗಿದೆ. ಈಗಾಗಲೇ ಹಲವರು ಬಣ್ಣವನ್ನು ಸಂಗ್ರಹಿಸಿಟ್ಟುಕೊಳ್ಳುವ ಕಾರ್ಯವನ್ನೂ ಆರಂಭಿಸಿದ್ದಾರೆ,

ಬಾಗಲಕೋಟೆ ಹೋಳಿ ಎನ್ನುವುದು ಮೇಲ್ನೋಟಕ್ಕೆ ಒಂದು ಸಡಗರದ ಆಚರಣೆ. ನಮ್ಮ ಸಂಸ್ಕೃತಿಯ ಹಿರಿಮೆಯನ್ನು ಅನಾವರಣಗೊಳಿಸುವ ವೇದಿಕೆಯಂತೂ ...