Bagalkot, ಮಾರ್ಚ್ 3 -- Bagalkot Holi 2025: ಬಾಗಲಕೋಟೆ ಕೃಷ್ಣಾ ನದಿಯ ದೊಡ್ಡ ಜಲಾಶಯವಾದ ಆಲಮಟ್ಟಿ ಹಿನ್ನೀರಿನ ಊರು. ಈ ಕಾರಣದಿಂದ ಎರಡು ದಶಕದ ಹಿಂದೆ ಬಾಗಲಕೋಟೆ ಹೊಸ ರೂಪ ಪಡೆದ ಚಂಡೀಗಢದ ನಂತರದ ನಗರದ ಹಿರಿಮೆಯನ್ನೂ ಪಡೆದಿದೆ. ಬಾಗಲಕೋಟೆ ಹೊಸ ರೂಪ ಪಡೆದುಕೊಂಡರೂ ಇಲ್ಲಿ ಹೋಳಿ ಹಬ್ಬ ಹಾಗೂ ಹಬ್ಬದ ಮುನ್ನಾ ದಿನಗಳ ಹಲಗೆ ಸಡಗರ ಮಾತ್ರ ಹಳೆಯದು, ಶತಮಾನದಿಂದಲೂ ಬಾಗಲಕೋಟೆ ಜನ ಮಾರ್ಚ್‌ ಬಂದರೆ ಬ್ಯುಸಿಯಾಗಿ ಬಿಡುತ್ತಾರೆ. ಅಷ್ಟೇ ಅಲ್ಲ ಜಾತಿ, ಧರ್ಮವನ್ನು ಮೀರಿ ಒಂದಾಗಿ ಬಿಡುತ್ತಾರೆ. ಅದಕ್ಕೆ ಕಾರಣವಾಗಿರುವುದು ಹೋಳಿ ಹಬ್ಬ. ಏಕೆಂದರೆ ಬಾಗಲಕೋಟೆಯಲ್ಲಿ ಜಾತಿಗಳ ಎಲ್ಲೆಯನ್ನು ಮೀರಿ ಹೋಳಿ ಹಬ್ಬ ಆಚರಿಸುತ್ತಾರೆ. ಹಲಗೆ ಹಿಡಿದು ಅದರ ನಿನಾದದಲ್ಲಿ ಕರಗಿ ಹೋಗಿ ಬಿಡುತ್ತಾರೆ. ಈ ವರ್ಷದ ಬಾಗಲಕೋಟೆಯ ಹಲಿಗಿ ಸಂಭ್ರಮ ಎರಡು ದಿನದ ಹಿಂದೆಯೇ ಆರಂಭಗೊಂಡಿದೆ. ಇನ್ನೂ ಎರಡು ವಾರ ಈ ಗುಂಗು ಬಾಗಲಕೋಟೆಯನ್ನು ಆವರಿಸಲಿದೆ.

ಉತ್ತರ ಕರ್ನಾಟಕದ ಪ್ರಮುಖ ವ್ಯಾಪಾರಿಗಳಲ್ಲಿ ಬಾಗಲಕೋಟೆ ಒಂದು. ಆಲಮಟ್ಟಿ ಜಲಾಶಯ ನಿರ್ಮಾಣದ ಬಾಗಲಕೋಟೆ ಭಾಗದ ನೀ...