Bagalkot, ಮಾರ್ಚ್ 16 -- ಹೋಳಿ ಹಬ್ಬ ಎಂದರೆ ಅದು ಬಣ್ಣಗಳ ಹಬ್ಬವೇ. ಅದರಲ್ಲೂ ಜನರು ಸೇರಿ ಖುಷಿಯಿಂದ ಆಚರಿಸುವ ಹೋಳಿ ಸಡಗರ ಕರ್ನಾಟಕದಲ್ಲಿ ಜೋರಾಗಿಯೇ ಇದೆ.

ಬಾಗಲಕೋಟೆಯಲ್ಲಿ ವಿವಿಧ ಪ್ರದೇಶದವರು ಬಣ್ಣದ ಬಂಡಿಯನ್ನು ನಿರ್ಮಿಸಿ ಪ್ರಮುಖ ರಸ್ತೆಯಲ್ಲಿ ಬಣ್ಣ ಆಡುವುದು ಇಲ್ಲಿನ ವಿಶೇಷ.

ಈ ಬಾರಿ ಬಾಗಲಕೋಟೆಯ ಹೋಳಿ ಹಬ್ಬದ ಸಡಗರಕ್ಕೆ ಡಿ ಬಾಸ್‌ ದರ್ಶನ್‌ ಕೂಡ ಆಗಮಿಸಿದ್ದರು. ಅದು ಅಭಿಮಾನಿಗಳು ಹಿಡಿದ ಫೋಟೋ ರೂಪದಲ್ಲಿ.

ವಿವಿಧ ವೇಷಗಳನ್ನು ಧರಿಸಿದ ಯುವಕರು ಹಾಗೂ ಯುವತಿಯರು ಹೋಳಿ ಹಬ್ಬವನ್ನು ಬಾಗಲಕೋಟೆಯಲ್ಲಿ ಆಚರಿಸುತ್ತಾರೆ.

ಬಾಗಲಕೋಟೆಯ ಖಿಲ್ಲಾ ಪ್ರದೇಶದಲ್ಲಿ ಹಲವಾರು ವರ್ಷಗಳಿಂದ ಹೋಳಿ ನಡೆಯುತ್ತದೆ. ಎಲ್ಲಾ ಜಂಜಾಟಗಳನ್ನು ಮರೆದು ಮೂರ್ನಾಲ್ಕು ದಿನ ಯುವಕರು ಹೋಳಿ ಆಡುತ್ತಾರೆ.

ಬಾಗಲಕೋಟೆಯ ಬಸವೇಶ್ವರ ವೃತ್ತದ ಬಳಿ ಹೋಳಿ ಹಬ್ಬದ ಬಂಡಿಗಳ ಸಮಾಗಮ ನಿರಂತರ ಬಣ್ಣ ಉಗ್ಗಿ ಕುಣಿದು ಕುಪ್ಪಳಿಸುವ ವಾತಾವರಣ ನೋಡುವುದೇ ಚಂದ.

ಯುವಕರಂತೂ ಮೂರು ದಿನಗಳ ಕಾಲ ಎಲ್ಲವನ್ನೂ ಬಿಟ್ಟು ಹೋಳಿಯನ್ನು ಆಟವಾಡಿ ಖುಷಿಪಡುತ್ತಾರೆ.

ಅದರಲ್ಲ...