Bagalkot, ಮಾರ್ಚ್ 13 -- ಬಾಗಲಕೋಟೆ ಬರೀ ಬಿಸಿಲಿನಿಂದ ಗುರುತಿಸಿಕೊಂಡಿಲ್ಲ. ಇಲ್ಲಿನ ಹೋಳಿ ಹಬ್ಬಕ್ಕೆ ತನ್ನದೇ ಆದ ಇತಿಹಾಸ, ವೈವಿಧ್ಯತೆ ಹಾಗೂ ಸಂತಸದ ಮುಖವಿದೆ. ಈಗಾಗಲೇ ಬಾಗಲಕೋಟೆಯಲ್ಲಿ ಈ ವರ್ಷದ ಹೋಳಿ ಸಡಗರಕ್ಕೆ ಚಾಲನೆ ಸಿಕ್ಕಿದೆ.

ಹೋಳಿ ಹಬ್ಬಕ್ಕೆ ಚಾಲನೆ ಸಿಗುವುದು ಕಾಮದಹನದಿಂದ. ಬಾಗಲಕೋಟೆಯ ಹಳೆ ಪ್ರದೇಶವಾದ ಖಿಲ್ಲಾ ಬಡಾವಣೆಯಲ್ಲಿ ರಾತ್ರಿಯಿಂದಲೇ ಕಾಮಣ್ಣನನ್ನು ಸಿದ್ದಪಡಿಸಲಾಗುತ್ತದೆ.

ಕಾಮಣ್ಣನ ಚಿತ್ರವನ್ನು ಬಿಡಿಸಿ ಮರಮುಟ್ಟುಗಳನ್ನು ಯುವಕರ ಗುಂಪು ಪ್ರತಿ ಬಡಾವಣೆಯಲ್ಲಿ ಸಂಗ್ರಹಿಸುತ್ತದೆ.

ಮನೆ ಬಾಗಿಲು,. ಕಿಟಕಿ, ಮರದ ವಸ್ತುಗಳು ಕಾಮದಹನಕ್ಕೆ ಬಾಗಲಕೋಟೆಯಲ್ಲಿ ಸಂಗ್ರಹಿಸುವುದು ವಿಶೇಷ.

ಇದಕ್ಕೆ ಆಳೆದತ್ತರದಲ್ಲಿ ಮರ, ತೆಂಗಿನ ಗರಿ, ಏಣಿ ಸಹಿತ ಮರದ ವಸ್ತುಗಳನ್ನು ಹಾಕಲಾಗುತ್ತದೆ, ಮೇಲ್ಭಾಗದಲ್ಲಿ ಮರದ ಕಾಮಣ್ಣನನ್ನು ಕೂರಿಸಲಾಗುತ್ತದೆ.

ಆನಂತರ ಪೂಜಾ ವಿಧಿ ವಿಧಾನಗಳನ್ನು ಮುಗಿಸಿ ಕಾಮಣ್ಣನಿಗೆ ಬೆಂಕಿ ಕೊಟ್ಟು ದಹನ ಪ್ರಕ್ರಿಯೆ ಶುರು ಮಾಡಲಾಗುತ್ತದೆ.

ಕಾಮಣ್ಣನಿಗೆ ಬೆಂಕಿ ಕೊಟ್ಟ ನಂತರ ಅಲ್ಲಿದ್ದವರು ಬ...