Bangalore, ಮೇ 6 -- ಬೆಂಗಳೂರು: ಕನ್ನಡ ಕಿರುತೆರೆಯ ಸೆಲೆಬ್ರಿಟಿ ದಂಪತಿ ದರ್ಶಕ್‌ ಗೌಡ ಮತ್ತು ನಟಿ ಶಿಲ್ಪಾ ರವಿ ಹೊಸ ರೀಲ್ಸ್‌ ಹಂಚಿಕೊಂಡಿದ್ದಾರೆ. ತಮ್ಮ ಸೀಮಂತ ಸಂಭ್ರಮದ ರೀಲ್ಸ್‌ ಹಂಚಿಕೊಂಡಿದ್ದು, ಶೀಘ್ರದಲ್ಲಿಯೇ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ದಂಪತಿ ಕೊರೊನಾ ಲಾಕ್‌ಡೌನ್‌ ಸಮಯದಲ್ಲಿ ವಿವಾಹವಾಗಿದ್ದರು.

ತಮ್ಮ ಸೀಮಂತ ಸಂಭ್ರಮವನ್ನು ತಮಾಷೆಯ, ಭಾವನಾತ್ಮಕ ರೀಲ್ಸ್‌ ಮೂಲಕ ಜೀವ ಹೂವಾಗಿದೆ ಸೀರಿಯಲ್‌ ನಟಿ ಶಿಲ್ಪಾ ರವಿ ಹಂಚಿಕೊಂಡಿದ್ದಾರೆ. "ಎಲ್ಲರೂ ಈ ಸಾಧನೆಗೆ ನಾನೇ ಕಾರಣ ಎನ್ನುತ್ತಾರೆ. ಆದರೆ, ಇದಕ್ಕೆಲ್ಲ ಕಾರಣ ಇವರು" ಎನ್ನುವ ಆಡಿಯೋ ಇರುವ ರೀಲ್ಸ್‌ ಹಂಚಿಕೊಂಡಿದ್ದಾರೆ. ಈ ವಿಡಿಯೋದ ಕೊನೆಗೆ ಈ ದಂಪತಿ ಭಾವನಾತ್ಮಕವಾಗಿ ಹತ್ತಿರವಾಗುವ ದೃಶ್ಯವಿದೆ. ಪುಟ್ಟ ರೀಲ್ಸ್‌ ಮೂಲಕ ಸೀಮಂತ ಸಂಭ್ರಮವನ್ನು ಇವರು ಹಂಚಿಕೊಂಡಿದ್ದಾರೆ. ಇವರಿಗೆ ಅಭಿನಂದನೆಗಳ ಮಹಾಪೂರವೇ ಸೋಷಿಯಲ್‌ ಮೀಡಿಯಾದಲ್ಲಿ ಹರಿದುಬರುತ್ತಿದೆ.

ಸೀಮಂತ ಕಾರ್ಯಕ್ರಮಕ್ಕೆ ನಟಿ ಶಿಲ್ಪಾ ರವಿ ಪಿಂಕ್‌ ಬಣ್ಣದ ಬಾರ್ಡ್‌ ಇರುವ ತುಸು ಬಿಳಿ ಬಣ್ಣದ ಸ...