ಭಾರತ, ಫೆಬ್ರವರಿ 18 -- ವರುಣ್ ಧವನ್ ಮತ್ತು ಕೀರ್ತಿ ಸುರೇಶ್ ಅಭಿನಯದ ಬೇಬಿ ಜಾನ್ ಸಿನಿಮಾ ಡಿಸೆಂಬರ್ 25, 2024ರಂದು ತೆರೆಕಂಡಿದೆ. ಕಲೀಸ್ ನಿರ್ದೇಶನದ ಈ ಚಿತ್ರವು ವರುಣ್‌ ಅಭಿನಯದ ಇನ್ನೊಂದು ಮಗ್ಗುಲನ್ನು ನೋಡುವಂತೆ ಮಾಡಿದೆ. ಆಕ್ಷನ್ ಥ್ರಿಲ್ಲರ್ ಸಿನಿಮಾ ಇದಾಗಿದ್ದು ಸಾಕಷ್ಟು ಜನರಿಗೆ ಈ ಸಿನಿಮಾ ಇಷ್ಟವಾಗಿದೆ. ಆದರೂ, ಈ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಅಷ್ಟೊಂದು ಸದ್ದು ಮಾಡಿಲ್ಲ. ಸಿನಿಮಾ ತೆರೆಕಂಡ ಕೆಲವೇ ದಿನ ಥಿಯೇಟರ್‍‌ಗಳಲ್ಲಿ ಪ್ರದರ್ಶನ ಕಂಡಿದೆ. ಇದೀಗ 'ಬೇಬಿ ಜಾನ್‌' ಸಿನಿಮಾ ಒಟಿಟಿಗೆ ಯಾವಾಗ ಪ್ರವೇಶಿಸಲಿದೆ ಎಂಬ ಪ್ರಶ್ನೆ ಮೂಡಿದೆ.

ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಕೇವಲ 42 ದಿನಗಳ ನಂತರ (ಫೆ 5) ಬೇಬಿ ಜಾನ್ ಅಮೆಜಾನ್ ಪ್ರೈಂ ವೀಡಿಯೊಗೆ ಪ್ರವೇಶಿಸಿದೆ. ಆದರೆ, ಇದು ಇನ್ನೂ ಉಚಿತ ಸ್ಟ್ರೀಮಿಂಗ್‌ಗೆ ಲಭ್ಯವಿಲ್ಲ. ವೀಕ್ಷಕರು ಚಿತ್ರವನ್ನು ವೀಕ್ಷಿಸಲು 249 ರೂ ಪಾವತಿಸಬೇಕಾಗುತ್ತದೆ. ಆಗ ಮಾತ್ರ ಸಿನಿಮಾ ನೋಡಲು ಸಾಧ್ಯ. ಕೀರ್ತಿ ಸುರೇಶ್‌ ಹಾಗೂ ವರುಣ್ ಧವನ್ ಈ ಸಿನಿಮಾ ಕುರಿತು ಸಾಕಷ್ಟು ಪ್ರಚಾರ ಮಾಡಿದ್ದರ...