ಭಾರತ, ಏಪ್ರಿಲ್ 26 -- ಶಿಶುಗಳಿಗೆ ನೀಡುವ ಆಹಾರದ ವಿಚಾರದಲ್ಲಿ ಸಾಕಷ್ಟು ಎಚ್ಚರ ವಹಿಸಬೇಕು. ಮಕ್ಕಳಿಗೆ ನೀಡುವ ಆಹಾರದಲ್ಲಿ ಕೊಂಚ ವ್ಯತ್ಯಯವಾದ್ರೂ ಆರೋಗ್ಯ ಸಮಸ್ಯೆಗಳು ಎದುರಾಗಬಹುದು. ಮಾತ್ರವಲ್ಲ ಇದು ಅವುಗಳಲ್ಲಿ ದೀರ್ಘಕಾಲದ ಸಮಸ್ಯೆಗಳು ಉದ್ಭವವಾಗಲು ಕಾರಣವಾಗಬಹುದು. ಇತ್ತೀಚಿನ ವರದಿಯ ಪ್ರಕಾರ ನೆಸ್ಲೆ ಕಂಪನಿಯ ಸೆರಿಲ್ಯಾಕ್‌ನಲ್ಲಿ ಸಕ್ಕರೆ ಅಂಶ ಅಧಿಕವಾಗಿರುವುದು ಬೆಳಕಿಗೆ ಬಂದಿದೆ. ಇನ್ನೂ ಕೆಲವು ಶಿಶು ಆಹಾರಗಳಲ್ಲಿ ರಾಸಾಯನಿಕ ಅಂಶಗಳಿರುವುದು ಪತ್ತೆಯಾಗಿದೆ. ಹೀಗಾಗಿ ಮನೆಯಲ್ಲೇ ಶಿಶು ಆಹಾರಗಳನ್ನು ತಯಾರಿಸುವುದು ಉತ್ತಮ. ಸಿರಿಧಾನ್ಯಗಳಿಂದ ಮಕ್ಕಳ ಮಕ್ಕಳ ಆಹಾರವನ್ನು ಮನೆಯಲ್ಲೇ ತಯಾರಿಸಬಹುದು. ಅದರಲ್ಲೂ ರಾಗಿ ಬೆಸ್ಟ್‌ ಎನ್ನಬಹುದು. ರಾಗಿಯಿಂದ ತಯಾರಿಸಿದ ಶಿಶು ಆಹಾರವು ಮಕ್ಕಳ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ರಾಗಿ ಹಿಟ್ಟಿನಿಂದ ಬೇಬಿ ಫುಡ್ ಮಾಡಿ ಶೇಖರಿಸಿಟ್ಟರೆ ಮೂರು ತಿಂಗಳು ಬಳಸಬಹುದು. ಇದನ್ನು ಮಾಡುವುದು ಕೂಡ ತುಂಬಾ ಸುಲಭ.

ಇದನ್ನೂ ಓದಿ: Summer Care: ಬೇಸಿಗೆಯಲ್ಲಿ ನವಜಾತ ಶಿಶುಗಳನ್ನು ಕಾಡುವ ಸಮಸ್ಯೆ...