Bengaluru, ಮಾರ್ಚ್ 31 -- ಮಾರ್ಚ್ 28 ರ ಶುಕ್ರವಾರ, ಭೂಕಂಪವು ಮ್ಯಾನ್ಮಾರ್, ಥೈಲ್ಯಾಂಡ್ ಸೇರಿದಂತೆ ಹಲವು ದೊಡ್ಡ ಪ್ರದೇಶಗಳನ್ನು ನಡುಗಿಸಿತು. ರಿಕ್ಟರ್ ಮಾಪಕದಲ್ಲಿ ಭೂಕಂಪದ ತೀವ್ರತೆ 7.7ರಷ್ಟಿತ್ತು. ಅಂತಹ ಪರಿಸ್ಥಿತಿಯಲ್ಲಿ, ಅನೇಕ ಜನರು ಬಲ್ಗೇರಿಯಾದ ಪ್ರವಾದಿ ಬಾಬಾ ವಂಗಾ ಅವರ ಭವಿಷ್ಯವಾಣಿಯನ್ನು ನೆನಪಿಸಿಕೊಂಡಿದ್ದಾರೆ. 2025ರಲ್ಲಿ ಅವರು ಯಾವ ಭವಿಷ್ಯ ನುಡಿದಿದ್ದರು? ನೈಸರ್ಗಿಕ ವಿಪತ್ತುಗಳ ಬಗ್ಗೆ ಅವರು ಏನು ಹೇಳಿದ್ದಾರೆ ಎನ್ನುವುದು ಇಲ್ಲಿದೆ ನೋಡಿ.

ಬಾಲ್ಕನ್‌ನ ನಾಸ್ಟ್ರಾಡಾಮಸ್ ಎಂದು ಕರೆಯಲ್ಪಡುವ ಬಾಬಾ ವಂಗಾ ಮೂಲತಃ ಬಲ್ಗೇರಿಯಾದವರು. 12 ನೇ ವಯಸ್ಸಿನಲ್ಲಿ, ಅವರು ಚಂಡಮಾರುತದಲ್ಲಿ ದೃಷ್ಟಿ ಕಳೆದುಕೊಂಡರು. ಬಹಳ ಚಿಕ್ಕ ವಯಸ್ಸಿನಲ್ಲಿ, ಅವರು ಭಯಾನಕ ಸಂಕಷ್ಟ ಎದುರಿಸಿದರು. ಅಂದಿನಿಂದ ಅವರು ವಿಶೇಷ ಶಕ್ತಿಯನ್ನು ಹೊಂದಿದ್ದಾರೆ ಎಂದು ಹೇಳಲಾಗುತ್ತದೆ.

ಬಾಬಾ ವಂಗಾ ಅವರ ಭವಿಷ್ಯ: ಬಾಬಾ ವಂಗಾ 1996 ರಲ್ಲಿ ನಿಧನರಾದರು. ಬಾಬಾ ವಂಗಾ ಅವರು ತಮ್ಮ ಜೀವಿತಾವಧಿಯಲ್ಲಿ ಹೇಳಿದ್ದ ಅನೇಕ ಭವಿಷ್ಯವಾಣಿಗಳು ನಿಜವಾಗಿದೆ ಎ...