ಭಾರತ, ಏಪ್ರಿಲ್ 11 -- Ayyana Mane OTT release date: ಅಯ್ಯನ ಮನೆ ಎಂಬ ಹೊಸ ಒರಿಜಿನಲ್‌ ಕನ್ನಡ ವೆಬ್‌ ಸರಣಿ ಬಿಡುಗಡೆಯಾಗಲು ಸಜ್ಜಾಗಿದೆ. ಈ ವೆಬ್‌ ಸರಣಿಯು ಜೀ5 ಒಟಿಟಿಯಲ್ಲಿ ಬಿಡುಗಡೆಯಾಗಲಿದೆ. ಅಂದಹಾಗೆ, ಕನ್ನಡದಲ್ಲಿ ವೆಬ್‌ಸರಣಿಗಳು ಬಿಡುಗಡೆಯಾಗುವುದು ತೀರಾ ಅಪರೂಪ. ತಮಿಳು, ತೆಲುಗು, ಮಲಯಾಳಂನಲ್ಲಿ ಆಗಾಗ ಹೊಸ ಒರಿಜಿನಲ್‌ ವೆಬ್‌ಸರಣಿಗಳು ಬಿಡುಗಡೆಯಾಗುತ್ತವೆ. ಹಿಂದಿ ಭಾಷೆಯಲ್ಲಿಯಂತೂ ಹತ್ತು ಹಲವು ವೆಬ್‌ ಸರಣಿಗಳು ಬಿಡುಗಡೆಯಾಗುತ್ತಿವೆ. ಕನ್ನಡಿಗರು ಇಂತಹ ವೆಬ್‌ಸರಣಿಗಳ ಕನ್ನಡ ಅವತರಣಿಕೆಗಳನ್ನು ಅಥವಾ ಬೇರೆ ಭಾಷೆಯಲ್ಲಿ ವೆಬ್‌ಸರಣಿಗಳನ್ನು ನೋಡುತ್ತಾ ತೃಪ್ತರಾಗುತ್ತಿದ್ದರು. ಕನ್ನಡದಲ್ಲಿಯೂ ವೆಬ್‌ ಸರಣಿಗಳು ಬಿಡುಗಡೆಯಾಗಿದ್ದರೆ ಚೆನ್ನಾಗಿತ್ತು ಎಂದುಕೊಂಡಿದ್ದರು. ಇದೀಗ ರಮೇಶ್‌ ಇಂದಿರಾ ನಿರ್ದೇಶನದ ಮಿನಿ ವೆಬ್‌ಸರಣಿ ಒಟಿಟಿಯಲ್ಲಿ ಬಿಡುಗಡೆಯಾಗಲು ರೆಡಿಯಾಗಿದೆ.

ಜೀ 5 ಒಟಿಟಿಯಲ್ಲಿ ಇದೇ ಏಪ್ರಿಲ್‌ 25ರಿಂದ ಅಯ್ಯನ ಮನೆ ಎಂಬ ಮಿನಿ ವೆಬ್‌ಸರಣಿ ರಿಲೀಸ್‌ ಆಗಲಿದೆ. ಇದು ಕೇವಲ ಏಳು ಎಪಿಸೋಡ್‌ಗಳನ್ನು ಹೊಂದಿ...