New Delhi,Bengaluru, ಜನವರಿ 23 -- ಅಯೋಧ್ಯೆ ರಾಮ ಮಂದಿರ (Ayodhya Ram Mandir) ಉದ್ಘಾಟನೆ ಮತ್ತು ಬಾಲರಾಮ ಪ್ರಾಣ ಪ್ರತಿಷ್ಠಾ (Ram Lalla Pran Pratishtha) ಕಾರ್ಯಕ್ರಮ ಮುಗಿಯುತ್ತಿದ್ದಂತೆ ಪಾಕಿಸ್ತಾನ ಸರ್ಕಾರ (Pakistan Govt), ಅದನ್ನು ಖಂಡಿಸಿ ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡಿದೆ.

ಪಾಕಿಸ್ತಾನದ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಎಕ್ಸ್‌ ಖಾತೆಯಲ್ಲಿ ಈ ಪತ್ರಿಕಾ ಹೇಳಿಕೆಯನ್ನು ಶೇರ್ ಮಾಡಿದ್ದು, "ಭಾರತದ ಅಯೋಧ್ಯೆಯಲ್ಲಿ ಧ್ವಂಸಗೊಂಡ ಬಾಬರಿ ಮಸೀದಿಯ ಸ್ಥಳದಲ್ಲಿ 'ರಾಮ ಮಂದಿರ' ನಿರ್ಮಾಣ ಮತ್ತು ಪವಿತ್ರೀಕರಣ ಕಾರ್ಯವನ್ನು ಪಾಕಿಸ್ತಾನ ಖಂಡಿಸುತ್ತದೆ." ಎಂದು ಹೇಳಿಕೊಂಡಿದೆ.

"ಕೆಡವಲ್ಪಟ್ಟ ಮಸೀದಿಯ ಸ್ಥಳದಲ್ಲಿ ನಿರ್ಮಿಸಲಾದ ಮಂದಿರವು ಮುಂದಿನ ದಿನಗಳಲ್ಲಿ ಭಾರತದ ಪ್ರಜಾಪ್ರಭುತ್ವಕ್ಕೆ ಕಳಂಕವಾಗಿ ಉಳಿಯುತ್ತದೆ. ವಿಶೇಷವಾಗಿ, ವಾರಾಣಸಿಯ ಜ್ಞಾನವಾಪಿ ಮಸೀದಿ ಮತ್ತು ಮಥುರಾದ ಶಾಹಿ ಈದ್ಗಾ ಮಸೀದಿ ಸೇರಿ ಮಸೀದಿಗಳ ಮೇಲೆ ದೇವಾಲಯ ನಿರ್ಮಿಸಲು ಉದ್ದೇಶಿಸಿರುವ ಪಟ್ಟಿ ಬೆಳೆಯುತ್ತಿದೆ. ಇದು ಅಪವಿತ್ರತೆ ಮತ...