Hubli, ಮಾರ್ಚ್ 5 -- ASEAN Astronomy Camp: ಹುಬ್ಬಳ್ಳಿಯ ಕೇಂದ್ರೀಯ ವಿದ್ಯಾಲಯ ನಂ 1ರ 10ನೇ ತರಗತಿ ವಿದ್ಯಾರ್ಥಿನಿ ಕೃಷಿ ಸಂಗಮೇಶ ಮೆಣಸಿನಕಾಯಿ ಥೈಲ್ಯಾಂಡ್‌ನ ಚಿಯಾಂಗ್ ಮಾಯ್‌ (Chiang Mai) ಎಂಬಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಖಗೋಳಶಾಸ್ತ್ರ ಶಿಬಿರಕ್ಕೆ ಆಯ್ಕೆಯಾಗಿದ್ದಾರೆ. ಆಗ್ನೇಯ ಏಷ್ಯಾ ರಾಷ್ಟ್ರಗಳ ಸಂಘ (ASEAN) ಅಸ್ಟ್ರೊನೊಮಿ ಕ್ಯಾಂಪ್‌ಗೆ (ASEAN Astronomy Camp-ಎಎಸಿ) ಇದಾಗಿದ್ದು, ಮಾರ್ಚ್‌ 11 ರಿಂದ 14ರ ತನಕ ನಡೆಯಲಿದೆ.

ನ್ಯಾಷನಲ್ ಅಸ್ಟ್ರೊನೊಮಿ ರೀಸರ್ಚ್ ಇನ್‌ಸ್ಟಿಟ್ಯೂಟ್ ಆಫ್ ಥೈಲ್ಯಾಂಡ್ (NARIT-ನರಿಟ್) ಹಾಗೂ ಯುನೆಸ್ಕೊದ ಅಂತಾರಾಷ್ಟ್ರೀಯ ಖಗೋಳ ತರಬೇತಿ ಕೇಂದ್ರಗಳು (International Training Center in Astronomy under UNESCO - ITCA) ಜಂಟಿಯಾಗಿ ಈ ಶಿಬಿರವನ್ನು ನಡೆಸುತ್ತವೆ. ಈ ಶಿಬಿರವು 15 ರಿಂದ 19 ವರ್ಷದೊಳಗಿನ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಗುತ್ತಿದ್ದು, ಇದಕ್ಕೆ ವಿಶ್ವದ ನಾನಾ ದೇಶಗಳ 316 ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದರು. ಅವರಲ್ಲಿ ಕೇವಲ 30 ವಿದ್ಯಾರ್ಥಿಗಳ...