ಭಾರತ, ಫೆಬ್ರವರಿ 8 -- ಅರವಿಂದ್ ಕೇಜ್ರಿವಾಲ್ ವ್ಯಕ್ತಿ-ವ್ಯಕ್ತಿತ್ವ: ದೆಹಲಿ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾಗಿದೆ. ಆಮ್ ಆದ್ಮಿ ಪಾರ್ಟಿ (ಆಪ್_ ನಾಯಕ ಅರವಿಂದ್ ಕೇಜ್ರಿವಾಲ್ ಪರ ಜನ ನಿಂತಿಲ್ಲ. ಅವರು ಸೋಲು ಅನುಭವಿಸಿದ್ದಾರೆ. ಸೋಲಿನ ಅಂತರ 4000ಕ್ಕೂ ಹೆಚ್ಚು ಮತಗಳು. ಆದರೂ ಸೋಲು ಸೋಲೇ. ಅವರ ರಾಜಕೀಯ ಪ್ರವೇಶ ಯಾವ ಭ್ರಷ್ಟಾಚಾರದ ವಿರುದ್ಧ ಹೋರಾಟವಾಗಿತ್ತೋ ಅದರದ್ದೇ ಸುಳಿಗೆ ಅವರ ರಾಜಕೀಯ ಬದುಕು ಸಿಲುಕಿತು. ಎರಡು ಮೂರು ವರ್ಷಗಳ ಅವಧಿಯಲ್ಲಿ ಸಾಕಷ್ಟು ಏಳುಬೀಳು ಕಂಡರು.

ಜನಸಾಮಾನ್ಯನಿಗೆ ಅಧಿಕಾರ ಸಿಗಬೇಕು, ಜನ ಲೋಕಪಾಲ ಕಾನೂನು ಜಾರಿಯಾಗಬೇಕು ಎಂದು ಆಗ್ರಹಿಸುತ್ತ ಅಣ್ಣಾ ಹಜಾರೆ ಅವರ ಪ್ರತಿಭಟನೆಯೊಂದಿಗೆ ಮುಂಚೂಣಿಗೆ ಬಂದು ರಾಜಕೀಯ ಪ್ರವೇಶ ಮಾಡಿದವರು ಅರವಿಂದ್ ಕೇಜ್ರಿವಾಲ್. ತನ್ನನ್ನು ತಾನು ಜನಸಾಮಾನ್ಯ ಎಂದು ಬಿಂಬಿಸಿಕೊಂಡು ರಾಜಕೀಯ ಮಹತ್ವಾಕಾಂಕ್ಷೆಯೊಂದಿಗೆ ಮುನ್ನಡೆದ ಅರವಿಂದ್ ಕೇಜ್ರಿವಾಲ್‌ 2012ರಲ್ಲಿ ಜನ ಸಾಮಾನ್ಯನ ಹೆಸರಲ್ಲೇ ಪಕ್ಷ ಸ್ಥಾಪಿಸಿದರು. ಹೌದು, ಆಮ್ ಆದ್ಮಿ ಪಾರ್ಟಿ (ಎಎಪಿ). ಅದಕ್ಕೆ ತಾವ...