Delhi, ಫೆಬ್ರವರಿ 7 -- Aravind Kejriwal: ದೆಹಲಿ ವಿಧಾನಸಭೆ ಚುನಾವಣೆ ಮುಗಿದು ಶನಿವಾರ ಮತ ಎಣಿಕೆ ನಡೆಯಲಿದ್ದು, ಇದಕ್ಕೂ ಮುನ್ನಾ ದಿನವೇ ದೆಹಲಿ ರಾಜಕೀಯ ಚಟುವಟಿಕೆ ಬಿರುಸುಗೊಂಡಿದೆ. ಫಲಿತಾಂಶ ಪ್ರಕಟಗೊಳ್ಳುವ ಮುನ್ನವೇ ಬಿಜೆಪಿಯು ದೆಹಲಿಯಲ್ಲಿ ಗೆಲ್ಲಬಹುದಾದ 16 ಶಾಸಕರನ್ನು ಸೆಳೆಯಲು ಕೋಟ್ಯಂತರ ರೂ. ಹಣ ವ್ಯಯಸುತ್ತಿದೆ ಎಂದು ಆಪ್‌ ಮುಖ್ಯಸ್ಥ, ಮಾಜಿ ಸಿಎಂ ಅರವಿಂದ ಕೇಜ್ರಿವಾಲ್‌ ಆರೋಪಿಸಿರುವುದು ತಲ್ಲಣ ಮೂಡಿಸಿದೆ. ಈ ಕುರಿತು ಎಸಿಬಿ ತನಿಖೆಗೆ ದೆಹಲಿ ಲೆಫ್ಟಿನೆಂಟ್‌ ಗವರ್ನರ್‌ ವಿ.ಕೆ.ಸಕ್ಸೇನಾ ಆದೇಶಿಸಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಎಸಿಬಿ ಅಧಿಕಾರಿಗಳು ಕೇಜ್ರಿವಾಲ್‌ ನಿವಾಸಕ್ಕೆ ತನಿಖೆಗೆಂದು ಆಗಮಿಸಿದ್ದಾರೆ. ಹಣದ ಮೂಲ ಯಾವುದು ಎನ್ನುವ ಮಾಹಿತಿ ನೀಡಿ ಎಂದು ಎಸಿಬಿ ಅಧಿಕಾರಿಗಳು ಕೇಜ್ರಿವಾಲ್‌ ವಿಚಾರಣೆ ನಡೆಸಲು ಮುಂದಾಗಿದ್ದು. ಆಪ್‌ ಕಾರ್ಯಕರ್ತರು ಮನೆ ಪ್ರವೇಶಿಸದಂತೆ ಅಡ್ಡಿಪಡಿಸಿರುವುದು ಹೈಡ್ರಾಮ ಸೃಷ್ಟಿಸಿದೆ.

ವಿಧಾನಸಭೆ ಚುನಾವಣೆ ಮುಗಿದು ಫಲಿತಾಂಶ ಬರಬೇಕಿದೆ. ಇದರ ನಡುವೆಯೇ ಬಿಜೆಪಿಯು ಆಮ್‌ ಆದ್...