ಭಾರತ, ಮಾರ್ಚ್ 17 -- ಸ್ಯಾಂಡಲ್‌ವುಡ್‌ನಲ್ಲಿ ಹಲವು ಸಿನಿಮಾಗಳಲ್ಲಿ ನಟಿಸಿದ ರವಿಕಿರಣ್‌ ಇದೀಗ, ಅಪ್ಪು ಅಭಿಮಾನಿ ಸಿನಿಮಾದಲ್ಲಿ ನಟಿಸಿದ್ದಾರೆ. ರಿಯಲ್‌ ಲೈಫ್‌ನಲ್ಲಿಯೂ ಅಪ್ಪು ಅಭಿಮಾನಿಯಾಗಿರುವ ರವಿಕಿರಣ್‌, ಇದೀಗ ಸಿನಿಮಾದಲ್ಲೂ ಅಂಥದ್ದೇ ಪಾತ್ರದ ಮೂಲಕ ಎದುರಾಗುತ್ತಿದ್ದಾರೆ.

ಪುನೀತ್‌ ರಾಜ್‌ಕುಮಾರ್‌ ಅವರ ಬರ್ತ್‌ಡೇ ಪ್ರಯುಕ್ತ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ನರಸಿಂಹಲು, ರಾಘವೇಂದ್ರ ರಾಜ್‌ಕುಮಾರ್, ಸಾರಾ ಗೋವಿಂದು, ಎಂ.ಎನ್. ಸುರೇಶ್ ಕಟೌಟ್‌ ಅನಾವರಣ ಮಾಡಿದರು. ಈ ವೇಳೆ ಚಿತ್ರಮಂದಿರದ ಮುಂದೆ ಅಪ್ಪು ಅಭಿಮಾನಿಗಳು ಜಮಾಯಿಸಿದ್ದರು.

ಕಟೌಟ್‌ ಅನಾವರಣ ಮಾಡಿ ಮಾತನಾಡಿದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ ಸಾರಾ ಗೋವಿಂದು, ಅಪ್ಪು ಹುಟ್ಟು ಹಬ್ಬದ ಪ್ರಯುಕ್ತ ರವಿಕಿರಣ್ ತಮ್ಮ ಅಪ್ಪು ಅಭಿಮಾನಿ ಸಿನಿಮಾದ ಪ್ರಚಾರ ಕಾರ್ಯ ಆರಂಭಿಸಿರುವುದು ಸಂತಸದ ವಿಷಯ. ಅಪ್ಪುಗೆ ಸಹಕಾರ ನೀಡಿದಂತೆ ಇವರನ್ನು ಬೆಳೆಸಿ ಎಂದು ಕನ್ನಡಿಗರನ್ನು ಕೋರಿದರು.

ಚಿತ್ರದಲ್ಲಿ ನಾಯಕ ರವಿಕಿರಣ್ ಪವರ್‌ಸ್ಟಾರ್ ಪುನೀ...