Bengaluru, ಫೆಬ್ರವರಿ 22 -- ಐಫೋನ್ 16ಇ ಬಗ್ಗೆ ನಿಮಗೆತಿಳಿದಿರದ ವಿಷಯಗಳುಐಫೋನ್ ಸರಣಿಯಲ್ಲಿ ಹೊಸದಾಗಿ ಮಾರುಕಟ್ಟೆಗೆ iPhone 16e ಬಿಡುಗಡೆಯಾಗಿದೆ. ಈಗಾಗಲೇ ಪ್ರಿ ಬುಕಿಂಗ್ ಆರಂಭವಾಗಿದ್ದು, ಫೆಬ್ರವರಿ 28ರಿಂದ ಮಾರುಕಟ್ಟೆಯಲ್ಲಿ ದೊರೆಯಲಿದೆ. ಹೊಸ ಫೋನ್‌ನ ವಿಶೇಷತೆಗಳು ಮತ್ತು ತಾಂತ್ರಿಕ ವೈಶಿಷ್ಟ್ಯಗಳ ಕುರಿತು ಮಾಹಿತಿ ಇಲ್ಲಿದೆ.

ಹಳೆಯ ನಾಚ್ ವಿನ್ಯಾಸಐಫೋನ್ 16e ನಲ್ಲಿ, ಐಫೋನ್ 14 ನಲ್ಲಿರುವಂತ ಹಳೆಯ ನಾಚ್ ವಿನ್ಯಾಸವನ್ನು ನೀಡಲಾಗಿದೆ. ಇತ್ತೀಚಿನ ಹಲವು ಐಫೋನ್‌ಗಳು ಡೈನಾಮಿಕ್ ಐಲ್ಯಾಂಡ್ ವೈಶಿಷ್ಟ್ಯವನ್ನು ಹೊಂದಿದ್ದು, ಅದನ್ನು ನೀವು iPhone 16e ನಲ್ಲಿ ಕಾಣುವುದಿಲ್ಲ.

ಕ್ಯಾಮೆರಾ ಕಂಟ್ರೋಲ್ ಬಟನ್ ಇಲ್ಲ

ವೀಡಿಯೊಗಳು, ಫೋಟೋಗಳನ್ನು ತ್ವರಿತವಾಗಿ ಸೆರೆಹಿಡಿಯಲು ಐಫೋನ್ 16e ನಲ್ಲಿ ಕ್ಯಾಮೆರಾ ಕಂಟ್ರೋಲ್ಬಟನ್ ಇಲ್ಲ. ಆದರ ಬದಲು ಸೆಲ್ಫಿ ತೆಗೆದುಕೊಳ್ಳಲು ನೀವು ಫೋನ್‌ನಲ್ಲಿ ಆಕ್ಷನ್ ಬಟನ್ ಅನ್ನು ಪಡೆಯುತ್ತೀರಿ. ಫ್ಲ್ಯಾಶ್‌ಲೈಟ್, ಫೋಕಸ್ ಮೋಡ್, ಮ್ಯೂಟ್ ಮೋಡ್, ವಾಯ್ಸ್ ಮೆಮೊ ಮುಂತಾದ ಹಲವು ಕೆಲಸಗಳನ್ನು ಈ ಆಕ್...