Bengaluru, ಮಾರ್ಚ್ 11 -- ಗ್ಯಾಜೆಟ್ ಮತ್ತು ಟೆಕ್ ಲೋಕದ ಜನಪ್ರಿಯ ಕಂಪನಿ ಆ್ಯಪಲ್, ನೂತನ ಫೋಲ್ಡಿಂಗ್ ಐಫೋನ್ ಪರಿಚಯಿಸುವ ದಿನಗಳು ದೂರವಿಲ್ಲ. ಆ್ಯಪಲ್ ಫೋಲ್ಡಿಂಗ್ ಐಫೋನ್ ಕುರಿತು ಕಳೆದ ಕೆಲವು ವರ್ಷಗಳಿಂದ ಗ್ಯಾಜೆಟ್ ಮಾರುಕಟ್ಟೆಯಲ್ಲಿ ಸುದ್ದಿ ಕೇಳಿಬರುತ್ತಿದೆ. ಆದಾಗ್ಯೂ, ಆ್ಯಪಲ್‌ಗೆ ಬಿಡಿಭಾಗ ಪೂರೈಸುವ ಅನೇಕ ಘಟಕಗಳು ಕಂಪನಿಯ ಮಾನದಂಡಗಳನ್ನು ಪೂರೈಸದ ಕಾರಣ ಯೋಜನೆಗಳು ಹಲವಾರು ವರ್ಷಗಳಿಂದ ವಿಳಂಬವಾಗಿವೆ. ಈಗ ಚಾಲ್ತಿಯಲ್ಲಿರುವ ಮಾಹಿತಿ ಪ್ರಕಾರ 2026 ರಲ್ಲಿ, ಆ್ಯಪಲ್ ಅಂತಿಮವಾಗಿ ತನ್ನ ಮೊದಲ ಫೋಲ್ಡಿಂಗ್ ಐಫೋನ್ ಬಿಡುಗಡೆ ಮಾಡುವ ಮೂಲಕ ಮಡಚಬಹುದಾದ ಸ್ಮಾರ್ಟ್‌ಫೋನ್‌ ಮಾರುಕಟ್ಟೆಗೆ ಪ್ರವೇಶಿಸುವ ಸಾಧ್ಯತೆಯಿದೆ.

ಆ್ಯಪಲ್ ಫೋಲ್ಡಿಂಗ್ ಐಫೋನ್ ಬಗ್ಗೆ ಈಗಾಗಲೇ ಹಲವು ಚರ್ಚೆಗಳು ಕೇಳಿಬಂದಿವೆ. ಟೆಕ್ ಮಾರುಕಟ್ಟೆ ವಿಶ್ಲೇಷಕ ಮಿಂಗ್-ಚಿ ಕುವೊ ಅವರು ಮಡಚಬಹುದಾದ ಐಫೋನ್ 2000 ಡಾಲರ್‌ಗಿಂದ ಹೆಚ್ಚು ದರ ಹೊಂದಿರಬಹುದು ಎಂದಿದ್ದಾರೆ, ಅಲ್ಲದೆ ಇದು ಅತ್ಯಂತ ದುಬಾರಿ ಮಡಚಬಹುದಾದ ಸಾಧನವಾಗಿ ಬರಬಹುದು. ನೀವು ಕೂಡ ಆ್ಯಪಲ್ ಫೋಲ್ಡಬ...