ಭಾರತ, ಫೆಬ್ರವರಿ 9 -- ಕೆಲವು ಹೂವಿನ ಗಿಡಗಳು ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಕಂಡುಬರುತ್ತವೆ. ಇದು ಗಾರ್ಡನ್‌ನಲ್ಲಿ ಇಲ್ಲ ಎಂದರೆ ಅಲ್ಲಿ ಗಾರ್ಡನ್‌ ಇರಲು ಸಾಧ್ಯವೇ ಇಲ್ಲ. ಇದು ಪ್ರಸಿದ್ಧಿ ಪಡೆದಿರುತ್ತವೆ. ಅಂತಹ ಹೂವಿನ ಗಿಡಗಳಲ್ಲಿ ಶಂಖಪುಷ್ಪ ಗಿಡ ಕೂಡ ಒಂದು. ಅದಕ್ಕೆ ಅಪರಾಜಿತ ಎಂದು ಕೂಡ ಕರೆಯುತ್ತಾರೆ. ಈ ನೀಲಿ ಹೂವುಗಳು ನೋಡಲು ತುಂಬಾ ಸುಂದರ. ಈ ಗಿಡವನ್ನು ಬಾಲ್ಕನಿಯಲ್ಲಿ ಬೆಳೆಸಿದರೆ, ಅದು ಬಳ್ಳಿಯಂತೆ ಹರಡುತ್ತದೆ.

ಧಾರ್ಮಿಕ ಹಿನ್ನಲೆಯ ಕಾರಣಗಳಿಂದಲೂ ಈ ಗಿಡವನ್ನು ಮನೆಯಲ್ಲಿ ನೆಡಬೇಕು ಎಂದು ಹೇಳಲಾಗುತ್ತದೆ. ಈ ಸಸ್ಯದ ಬೇರುಗಳು ಮತ್ತು ಹೂವುಗಳಿಗೆ ಆಯುರ್ವೇದದಲ್ಲೂ ವಿಶೇಷ ಮಹತ್ವವಿದೆ. ಅನೇಕ ರೋಗಗಳನ್ನು ಗುಣಪಡಿಸಲು ಇದನ್ನು ಬಳಸಲಾಗುತ್ತದೆ. ನಿಮ್ಮ ಮನೆಯಲ್ಲಿ ಶಂಖಪುಷ್ಪ ಗಿಡವನ್ನು ನೆಡಲು ನಿರ್ಧರಿಸಿದ್ದರೆ ಅದಕ್ಕೂ ಮುನ್ನ ನೀವು ಅದರ ಪ್ರಯೋಜನಗಳು ಮತ್ತು ಅನಾನುಕೂಲಗಳು ಈ ಎರಡರ ಬಗ್ಗೆಯೂ ತಿಳಿದುಕೊಂಡಿರಿ.

ಮನೆಯಲ್ಲಿ ಶಂಖಪುಷ್ಪ ಗಿಡವನ್ನು ಬೆಳೆಸುವುದರ ಒಂದು ಪ್ರಯೋಜನವೆಂದರೆ ಅದನ್ನು ಬೆಳೆಸಲು ಹೆಚ್ಚಿನ ...