ಭಾರತ, ಫೆಬ್ರವರಿ 28 -- ಕನ್ನಡದಲ್ಲಿ ಇತ್ತೀಚಿಗೆ ಕಾಡಿನ ಹಿನ್ನೆಲೆಯ ಚಿತ್ರಗಳ ಸಂಖ್ಯೆ ಹೆಚ್ಚಾಗುತ್ತಿವೆ. 'ಫಾರೆಸ್ಟ್', 'ಕಾಡುಮಲೆ' ಮುಂತಾದ ಚಿತ್ರಗಳಲ್ಲಿ ಕಾಡಿನ ರಹಸ್ಯ ಈಗಾಗಲೇ ತೆರೆದುಕೊಂಡಿದೆ. ಈಗ 'ಅಪಾಯವಿದೆ ಎಚ್ಚರಿಕೆ' ಚಿತ್ರದಲ್ಲಿ ಕಾಡಿನಲ್ಲಿ ನಡೆಯುವ ಒಂದಿಷ್ಟು ನಿಗೂಢ ಘಟನೆಗಳನ್ನು ಬಿಚ್ಚಿಡಲಾಗಿದೆ.

ಸೂರಿ, ಪೆಟ್ಟಿಗೆ ಮತ್ತು ಗಾಬರಿ ಎಂಬ ಮೂರು ಯುವಕರು ಕೆಲಸವಿಲ್ಲದೆ ಅಲೆಯುತ್ತಿರುತ್ತಾರೆ. ದಿನ ಬೆಳಗಾದರೆ ಸಾಲಗಾರರ ಕಾಟ, ನಿರುದ್ಯೋಗ, ಅವಮಾನಗಳಿಂದ ಬೇಸತ್ತಿರುವ ಮೂವರು, ದುಡ್ಡು ಸಂಪಾದನೆಗಾಗಿ ಅಡ್ಡದಾರಿ ಹಿಡಿಯುವುದಕ್ಕೆ ತೀರ್ಮಾನಿಸುತ್ತಾರೆ. ದಟ್ಟ ಕಾಡಿನಲ್ಲಿರುವ ಗಂಧದ ಮರ ಕಡಿದು, ಅದನ್ನು ಮಾರಿ ದುಡ್ಡು ಸಂಪಾದಿಸುವ ಯೋಚನೆ ಮಾಡುತ್ತಾರೆ. ಕಾಡಿಗೆ ಹೋಗುವ ಅವರಿಗೆ ಚಿತ್ರ-ವಿಚಿತ್ರ ಘಟನೆಗಳು ಎದುರಾಗುತ್ತವೆ. ಇವೆಲ್ಲದರಿಂದ ಅವರು ಹೇಗೆ ಪಾರಾಗುತ್ತಾರೆ ಮತ್ತು ಅಂದುಕೊಂಡಂತೆ ಹಣ ಗಳಿಸುವುದಕ್ಕೆ ಸಾಧ್ಯವಾಗುತ್ತದಾ ಎಂದು ಗೊತ್ತಾಗಬೇಕಿದ್ದರೆ 'ಅಪಾಯವಿದೆ ಎಚ್ಚರಿಕೆ' ಚಿತ್ರವನ್ನು ನೋಡಬೇಕು.

'ಅಪಾಯವಿದ...