ಭಾರತ, ಏಪ್ರಿಲ್ 13 -- ನಟಿ ಅನುಪಮಾ ಪರಮೇಶ್ವರನ್ ಹಾಗೂ ಧ್ರುವ್ ವಿಕ್ರಮ್ ಮಾರಿ ಸೆಲ್ವರಾಜ್ ನಿರ್ದೇಶನದ 'ಬೈಸನ್' ಚಿತ್ರದಲ್ಲಿ ಒಟ್ಟಿಗೆ ಕೆಲಸ ಮಾಡುತ್ತಿದ್ದಾರೆ. ಆದರೆ ಈ ಜೋಡಿಯ ನಡುವೆ ಸಮ್‌ಥಿಂಗ್ ಸಮ್‌ಥಿಂಗ್ ನಡೆಯುತ್ತಿದೆ ಎಂಬ ಗಾಳಿಸುದ್ದಿ ಎಲ್ಲೆಡೆ ಹರಿದಾಡುತ್ತಿದೆ. ಇದಕ್ಕೆ ಇಂಬು ನೀಡುವಂತೆ ರೆಡ್ಡಿಟ್ ಸಾಮಾಜಿಕ ಜಾಲತಾಣ ವೇದಿಕೆಯಲ್ಲಿ ಈ ಜೋಡಿಯ ಕಿಸ್ಸಿಂಗ್ ಫೋಟೊವೊಂದು ವೈರಲ್ ಆಗಿದೆ.

ಈ ಫೋಟೊ ನೋಡಿದ ಹಲವರು ಧ್ರುವ್ ಹಾಗೂ ಅನುಪಮಾ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಹೇಳುತ್ತಿದ್ದರೆ, ಕೆಲವರು ಇಲ್ಲ ಇದು ಬೈಸನ್ ಚಿತ್ರದ ಪ್ರಚಾರದ ಗಿಮಿಕ್ ಎನ್ನುತ್ತಿದ್ದಾರೆ. ಅಂದ ಹಾಗೆ ಧ್ರುವ್ ವಿಕ್ರಮ್ ತಮಿಳಿನ ಖ್ಯಾತ ನಟ ವಿಕ್ರಮ್ ಅವರ ಪುತ್ರ.

ರೆಡ್ಡಿಟ್‌ನ ಮಾಲಿವುಡ್‌, ಕಾಲಿವುಡ್ ಗ್ರೂಪ್‌ಗಳಲ್ಲಿ ಅನುಪಮಾ ಪರಮೇಶ್ವರನ್ ಎಂಬ ಹೆಸರಿನ ಬಳಕೆದಾರರು ಬ್ಲೂ ಮೂನ್ ಎಂಬ ಹೆಸರಿನಲ್ಲಿ ಸ್ಪೂಟಿ ಫೈ ಮಾಡಿದ ಲಿಸ್ಟ್‌ನ ಸ್ಕ್ರೀನ್ ಶಾಟ್ ಅನ್ನು ಹಂಚಿಕೊಂಡಿದ್ದಾರೆ. ತಮ್ಮ ಇಷ್ಟದ ನಟ-ನಟಿಯರ ಹೆಸರಿನಲ್ಲಿ ಅಭಿಮಾನಿಗಳು ಖಾತೆ ತೆರೆಯ...