ಭಾರತ, ಮಾರ್ಚ್ 2 -- ಅಣ್ಣಯ್ಯ ಧಾರಾವಾಹಿಯಲ್ಲಿ ರಶ್ಮಿ ಮದುವೆ ಆಗಿರುವ ಪ್ರಸಂಗ ಹೇಗಿತ್ತೆಂದರೆ, ಆ ಕ್ಷಣಕ್ಕೆ ಯಾರಿಗೂ ಮದುವೆಮನೆಯಲ್ಲಿ ಖುಷಿ ಇರಲಿಲ್ಲ. ಅಂತಹ ಘಳಿಗೆಯಲ್ಲಿ ಅವಳು ಮದುವೆ ಆಗಿದ್ದಾಳೆ. ಈಗ ಮದುವೆ ಆದದ್ದೇನೋ ಆಗಿದೆ. ಸೀನನ ಜತೆ ರಶ್ಮಿ ಸಂಸಾರ ಮಾಡಲೇಬೇಕು ಎಂಬಂತಾಗಿದೆ. ಆದರೆ ಸೀನ ಹಾಗೂ ಸೀನನ ತಾಯಿಗೆ ಈ ಮದುವೆ ಇಷ್ಟ ಇಲ್ಲ. ಆ ಕಾರಣಕ್ಕಾಗಿ ಅವರು ಸಾಕಷ್ಟು ನೋವನ್ನು ಅನುಭವಿಸುತ್ತಿದ್ದಾರೆ. ಅಷ್ಟೇ ಅಲ್ಲ ನೀಲಕ್ಕನಿಗೆ ರಶ್ಮಿ ಮೇಲೆ ಅಪಾರ ಕೋಪ ಬಂದಿದೆ. ರಶ್ಮಿ ತಾನೇನೂ ಮಾಡಲು ಸಾಧ್ಯ ಇಲ್ಲ ಎಂಬಂತೆ ಸುಮ್ಮನಾಗಿದ್ದಾಳೆ. ಹೀಗೆಲ್ಲ ಅಲ್ಲಿನ ಸಂಗತಿ ಇರುವಾಗ ಮದುವೆಯ ಮುಂದಿನ ಸಂಪ್ರದಾಯಗಳು ನಡೆಯಲೇಬೇಕಿದೆ.

ರಶ್ಮಿ ತನ್ನ ಹೊಸೆ ಮನೆಗೆ ಪ್ರವೇಶ ಮಾಡಿದ್ದಾಳೆ. ದೇವರ ಮುಂದೆ ನಿಂತು ದೀಪ ಬೆಳಗಿದ್ದಾಳೆ. ಅಣ್ಣಯ್ಯನ ಮುಖದಲ್ಲಿ ಸಂತೋಷ ಅದರೊಟ್ಟಿಗೆ ಆತಂಕ ಎರಡೂ ಇದೆ. ಆದರೆ ಪಾರುಗೆ ಇದೆಲ್ಲವೂ ಗೋಚರಿಸುತ್ತಿದೆ. ಅವಳು ಸಾಧ್ಯವಾದಷ್ಟು ಸಮಾಧಾನ ಮಾಡಲು ನೋಡುತ್ತಿದ್ದಾಳೆ. ಆದರೆ ಶಿವು ಸಮಾಧಾನ ಆಗುತ್ತಿಲ್ಲ. ರಶ್ಮಿಗೆ...