ಭಾರತ, ಮಾರ್ಚ್ 26 -- ಅಣ್ಣಯ್ಯ ಧಾರಾವಾಹಿಯಲ್ಲಿ ಶಿವು ಹಾಗೂ ಪಾರು ಇಬ್ಬರೂ ಬೇರೆಯಾಗುತ್ತಾರೆ ಎಂಬ ಸಂಗತಿಯನ್ನು ಪಂಚಾಯ್ತಿಯಲ್ಲಿ ಎಲ್ಲರನ್ನೂ ಕರೆದು ಊರಿಗೆ ಡಂಗೂರ ಸಾರಿದ್ದಾನೆ ವೀರಭದ್ರ. ಆದರೆ, ಶಿವು ಪಂಚಾಯ್ತಿಯಲ್ಲಿ ಪಾರು ಹಾಗೂ ತಾನು ಬೇರೆಯಾಗುತ್ತಿರುವ ವಿಚಾರವನ್ನು ಬಿಟ್ಟುಕೊಟ್ಟಿಲ್ಲ. ಬೇಕು ಎಂದೇ ಎಲ್ಲರ ಎದುರು ನಾಟಕ ಮಾಡಿದ್ದಾನೆ. ಆದರೆ, ಶಿವು ಮಾಡಿದ್ದು ನಾಟಕ ಎಂದು ಗೊತ್ತಾಗದ ಪಾರು ಖುಷಿಯಲ್ಲಿದ್ದಳು. ನನ್ನ ಮಾವನಿಗೆ ನನ್ನ ಮೇಲೆ ಇಷ್ಟಾದರೂ ಪ್ರೀತಿ ಇದೆಯಲ್ಲ ಎಂದು ಅಂದುಕೊಂಡಿದ್ದಳು. ಆದರೆ ಕೊನೆಯಲ್ಲಿ ಅವಳ ಖುಷಿಯೆಲ್ಲ ಹಾಳಾಗಿ ಹೋಯ್ತು.

ಪಾರು ಹಾಗೂ ಶಿವು ಪಂಚಾಯ್ತಿಯಿಂದ ನೇರವಾಗಿ ಮನೆಗೆ ಮರಳಿ ಬರುತ್ತಾರೆ. ಇನ್ನೇನು ಮನೆಯ ಬಾಗಿಲು ದಾಟಿ ಒಳಗಡೆ ಹೋಗಬೇಕು ಎನ್ನುವಷ್ಟರಲ್ಲಿ ಶಿವು, ಪಾರುವನ್ನು ತಡೆಯುತ್ತಾನೆ. ತಡೆದು ಮಾತಾಡಲು ಆರಂಭಿಸುತ್ತಾನೆ. ಪಂಚಾಯ್ತಿಯಲ್ಲಿ ನಾನು ತುಸು ಹೆಚ್ಚೇ ಮಾತಾಡಿಬಿಟ್ಟೆ ಎಂದು ಹೇಳುತ್ತಾನೆ. ತಾನು ಹಾಗೆಲ್ಲ ಮಾತಾಡಬಾರದಿತ್ತು ಎಂದು ಹೇಳುತ್ತಾ ಕ್ಷಮೆ ಕೇಳುತ್ತಾನೆ. ಪಾರುಗೆ...