ಭಾರತ, ಮಾರ್ಚ್ 20 -- ಅಣ್ಣಯ್ಯ ಧಾರಾವಾಹಿಯಲ್ಲಿ ಶಿವು ಹಾಗೂ ಪಾರು ಇಬ್ಬರು ಈಗ ತಮಗೆ ಬಂದ ಎಲ್ಲ ಕಷ್ಟಗಳಿಗೂ ಪರಿಹಾರ ಕಂಡುಕೊಂಡಿದ್ದಾರೆ. ಹರಾಜಾಗುತ್ತಿದ್ದ ಮನೆಯನ್ನು ಪಾರು ಉಳಿಸಿಕೊಟ್ಟಿದ್ದಾಳೆ. ರಶ್ಮಿ ಹಾಗೂ ಸೀನ ಕೂಡ ಖುಷಿಯಿಂದ ಮನೆಗೆ ಬಂದು ಹೋಗಿದ್ದಾರೆ. ಹೀಗಿರುವಾಗ ಅಣ್ಣಯ್ಯನಿಗೆ ನೆಮ್ಮದಿ ಸಿಕ್ಕಿದೆ. ಪಾರು ತನ್ನ ಕೋಣೆಯಲ್ಲಿ ಬಟ್ಟೆ ಸರಿ ಮಾಡುತ್ತಾ ಇರುತ್ತಾಳೆ. ಆಗ ಅವಳ ಜತೆ ಮಾತಾಡಬೇಕು ಎಂದು ಶಿವು ಅಂದುಕೊಳ್ಳುತ್ತಾನೆ. ತಾನೂ ಕೋಣೆಯೊಳಗಡೆ ಹೋಗಿ "ಪಾರು, ಅಂತು ನಮಗೆ ಬಂದ ಕಷ್ಟಗಳೆಲ್ಲ ಪರಿಹಾರ ಆಯ್ತು ಅಲ್ವ?" ಎಂದು ಕೇಳುತ್ತಾನೆ. ಆಗ ಪಾರು ಹೌದು ಎನ್ನುತ್ತಾ "ಮನೆ ಉಳಿತಲ್ಲಾ ಆಗ ಖುಷಿಯಾಗಿ ನೀನು ನನ್ನ ತಬ್ಬಿಕೊಂಡ್ಯಲ್ಲ ಮಾವ, ಆಗ ನಿನಗೇನು ಅನಿಸಿಲ್ವಾ?" ಎಂದು ಕೇಳುತ್ತಾಳೆ. ಆಗ ಶಿವು ಮುಖ ಸಣ್ಣಗಾಗುತ್ತದೆ.

ಅವನು ಆಗ ಆದ ಖುಷಿಯಲ್ಲಿ ಪರಿವೆಯೇ ಇಲ್ಲದೆ ಹೋಗಿ ಎಲ್ಲರ ಎದುರು ಪಾರುವನ್ನು ತಬ್ಬಿಕೊಂಡಿರುತ್ತಾನೆ. ಆ ನಂತರದಲ್ಲಿ ಪಾರು ಖುಷಿ ಆದರೂ ಅದನ್ನು ಹೊರಗಿನಿಂದ ತೋರಿಸಿಕೊಂಡಿರುವುದಿಲ್ಲ. ಇನ್ನು ಇತ್ತ...