ಭಾರತ, ಫೆಬ್ರವರಿ 26 -- ಅಣ್ಣಯ್ಯ ಧಾರಾವಾಹಿಯಲ್ಲಿ ರಶ್ಮಿ ಮದುವೆ ಸಂಚಿಕೆ ನಡೆಯುತ್ತಿದೆ. ರಶ್ಮಿ ಯಾರನ್ನು ಮದುವೆ ಆಗುತ್ತಾಳೆ? ಅಥವಾ ರಶ್ಮಿ ಮದುವೆ ಆಗೋದೇ ಇಲ್ವಾ? ಎಂಬ ಪ್ರಶ್ನೆ ವೀಕ್ಷಕರಲ್ಲಿ ಮೂಡಿದೆ. ರಶ್ಮಿಗೆ ಈ ಮೊದಲು ನಿಕ್ಕಿಯಾಗಿದ್ದ ಗಂಡು ಹಸೆಮಣೆಯಿಂದ ಎದ್ದು ಹೋಗಿದ್ದಾನೆ. ಅವನು ಎದ್ದು ಹೋದಾಗಿನಿಂದಲೂ ರಶ್ಮಿ ಮಂಕಾಗಿದ್ದಾಳೆ. ತನ್ನ ಜೀವನ ಈ ರೀತಿ ಆಗುತ್ತದೆ ಎಂದು ರಶ್ಮಿ ಈ ಹಿಂದೆ ಎಂದೂ ಅಂದುಕೊಂಡಿರಲಿಲ್ಲ. ಶಿವು ಕೂಡ ಇದ್ಯಾವುದನ್ನೂ ಬಯಸಿರಲಿಲ್ಲ. ಆದರೂ ರಶ್ಮಿ ಮದುವೆ ವಿಚಾರ ಮಾತ್ರ ಯಾರು ಊಹಿಸಿರದ ರೀತಿ ಆಗೋಗಿದೆ. ಶಿವು ಈ ಮದುವೆ ಮಂಟಪದಲ್ಲೇ ತನ್ನ ತಂಗಿಗೆ ಮದುವೆ ಮಾಡಬೇಕು ಎಂದು ನಿರ್ಧರಿಸಿದ್ದಾರೆ.

ಆದರೆ, ಪಾರು ಹಾಗೂ ನಾದಿನಿಯರು ರಶ್ಮಿ ಒಪ್ಪಿಗೆ ಇಲ್ಲದೆ ಮದುವೆ ಮಾಡೋದು ಸರಿ ಅಲ್ಲ ಎಂದು ಹೇಳಿದ್ದಾರೆ. ಗಂಡಿನ ಕಡೆಯವರು ರಶ್ಮಿಯನ್ನು ಅಲ್ಲೇ ಬಿಟ್ಟು ಹೋಗಿರುವುದನ್ನು ನೋಡಿ ಅಣ್ಣಯ್ಯ ಕಣ್ಣೀರು ಹಾಕುತ್ತಾ ಇರುತ್ತಾನೆ. ಆದರೆ, ಆಗ ಅವನಿಗೆ ಭರವಸೆಯಾಗಿ ನಿಂತಿದ್ದು ಮಾತ್ರ ಮಾದಪ್ಪಣ್ಣ. ನೀನು ಯೋಚನೆ ...