ಭಾರತ, ಮಾರ್ಚ್ 17 -- ಶಿವು ಮನೆ ಹರಾಜಿಗಿಟ್ಟಿದ್ದಾರೆ. ಆದರೆ ಈ ಸತ್ಯ ರಶ್ಮಿಗೆ ಗೊತ್ತೇ ಆಗಿರಲಿಲ್ಲ. ಹಲವಾರು ಸಾರಿ ಅವಳು ಎಲ್ಲವನ್ನು ಅಣ್ಣನಿಗೆ ಹೇಳಿಬಿಡಬೇಕು ಎಂದುಕೊಂಡರು ಸುಮ್ಮನಿದ್ದಾಳೆ. ಲೀಲಾ, ರಶ್ಮಿಯ ಮದುವೆ ಆದಾಗಿನಿಂದಲೂ ರಶ್ಮಿಗೆ ತೊಂದರೆಯನ್ನೇ ಕೊಡುತ್ತಿದ್ದಾಳೆ. ಸೀನ ಹೊರಗಿನಿಂದ ಬಂದ ತಕ್ಷಣ ಅಣ್ಣಯ್ಯನ ಮನೆ ಹರಾಜಾಗುತ್ತಿರುವ ವಿಚಾರವನ್ನು ಹೇಳುತ್ತಾನೆ. ಈಗಷ್ಟೇ ಸ್ನಾನ ಮಾಡಿ ಬರುತ್ತಿರುವ ರಶ್ಮಿಗೆ ಈ ವಿಚಾರ ತಿಳಿಯುತ್ತದೆ. ಅವಳು ತುಂಬಾ ಬೇಸರ ಮಾಡಿಕೊಳ್ಳುತ್ತಾಳೆ. ನಾನು ಈಗಲೇ ಅಣ್ಣ ಇದ್ದಲ್ಲಿಗೆ ಹೋಗ್ತಿನಿ ಎಂದು ಹೇಳುತ್ತಾ ಹೊರಡಲು ಮುಂದಾಗ್ತಾಳೆ. ರಶ್ಮಿ ತಯಾರಾಗಲು ಕೋಣೆಗೆ ಹೋದ ತಕ್ಷಣವೇ ಲೀಲಾ ಬಾಗಿಲು ಹಾಕಿ ಬಿಡ್ತಾಳೆ.

ರಶ್ಮಿ ಏನೇ ಆದರೂ ಅಣ್ಣಯ್ಯನ ಪರವಾಗಿ ಹೋಗಬಾರದು ಆ ರೀತಿ ಮಾಡುತ್ತಾಳೆ. ಇದರಿಂದ ರಶ್ಮಿಗೆ ಕೋಪ ಬರುತ್ತದೆ. ಇತ್ತ ಹತ್ತು ಲಕ್ಷಕ್ಕೆ ಶಿವು ಮನೆ ಹರಾಜಾಗುತ್ತಿರುವ ಸಂದರ್ಭದಲ್ಲಿ ಈ ಹಂಚಿನ ಮನೆಗೆ ಅಷ್ಟೊಂದು ಹಣಾನಾ? ಎಂದು ಪ್ರಶ್ನೆ ಮಾಡುತ್ತಾರೆ. ಮನೆಯ ಬಗ್ಗೆ ಕೇವಲವಾಗಿ ಮಾತಾಡ...