ಭಾರತ, ಮಾರ್ಚ್ 13 -- Annayya Serial: ಅಣ್ಣಯ್ಯ ಧಾರಾವಾಹಿಯಲ್ಲಿ ಶಿವು ಹಾಗೂ ಅವನ ಕುಟುಂಬವು ತೊಂದರೆಯಲ್ಲಿದೆ. ಮದುವೆಯಾಗಿ ಗಂಡನ ಮನೆ ಸೇರಿದ ರಶ್ಮಿಗೂ ಸುಖವಿಲ್ಲ. ಇತ್ತ ಮದುವೆ ಮಾಡಿ ಕಳಿಸಿದ ಕುಟುಂಬಕ್ಕೂ ಸುಖವಿಲ್ಲ ಎಂಬಂತಾಗಿದೆ. ಶಿವು ಹಾಗೂ ಪಾರು ಮತ್ತು ನಾದಿನಿಯರೆಲ್ಲ ಒಟ್ಟಿಗೆ ಕೂತು ಮಾತಾಡುತ್ತಾ ಇರುತ್ತಾರೆ. ಪಾರು ಕೈಯ್ಯಲ್ಲಿ ಊಟದ ತಟ್ಟೆ ಇರುತ್ತದೆ. ಆದರೆ, ಯಾರೂ ಊಟ ಮಾಡುತ್ತಾ ಇರುವುದಿಲ್ಲ. ಹೀಗಿರುವಾಗ ಅಣ್ಣಯ್ಯನಿಗೆ ಅವನ ತಾಯಿ ನೆನಪಾಗುತ್ತಾಳೆ. ಶಿವು ತಾಯಿ ಶಾರದಾ ಹಣವನ್ನು ತಾನೇ ತೆಗೆದುಕೊಂಡಿದ್ದೇನೆ ಎಂಬ ವಿಚಾರವನ್ನು ಎಲ್ಲಿಯೂ ಬಹಿರಂಗ ಪಡಿಸಿಲ್ಲ. ಆ ಹಣವನ್ನು ಹೇಗಾದರೂ ವಾಪಸ್ ಕೊಡಬೇಕು ಎಂದು ಅಂದುಕೊಂಡಿದ್ದಾಳೆ.

ಪಾರು ಹಾಗೂ ಶಿವು ಮನೆಯವರೆಲ್ಲರೂ ಸೇರಿ ಮಾತಾಡುತ್ತಾ ಇರುವುದನ್ನು ಶಾರದಾ ಕೇಳಿಸಿಕೊಳ್ಳುತ್ತಾಳೆ. ಆದರೆ, ಅವಳು ಮಾತಾಡುವ ಸ್ಥಿತಿಯಲ್ಲಿ ಇರುವುದಿಲ್ಲ. ಎಷ್ಟೇ ದುಃಖ ಆದರೂ ಸಹ ಅದನ್ನು ತಡೆದುಕೊಂಡು ಸುಮ್ಮನಾಗುತ್ತಾಳೆ. ಅವಳು ಅತ್ತು, ಅತ್ತು ತುಂಬಾ ಬೇಸರ ಮಾಡಿಕೊಂಡಿದ್ದರೂ ಅವಳಿಗೆ...