ಭಾರತ, ಫೆಬ್ರವರಿ 28 -- ಅಣ್ಣಯ್ಯ ಧಾರಾವಾಹಿಯಲ್ಲಿ ರಶ್ಮಿ ಮದುವೆಯಾಗಿ ಸೀನನ ಮನೆಗೆ ಬಂದಿದ್ದಾಳೆ. ಆದರೆ, ಸೀನ ಇನ್ಯಾರನ್ನೋ ಮದುವೆಯಾಗಬೇಕು ಎಂದು ಅಂದುಕೊಂಡಿರುವ ವಿಚಾರ ಯಾರಿಗೂ ತಿಳಿದಿರಲಿಲ್ಲ. ಸೀನ ಪಿಂಕಿಯನ್ನು ಮದುವೆಯಾಗಿ ಮನೆ ತುಂಬಿಸಿಕೊಳ್ಳಬೇಕು ಎಂದು ಕನಸು ಕಾಣುತ್ತಿದ್ದ. ಹಲವು ದಿನಗಳಿಂದ ಪಿಂಕಿಯನ್ನು ಪ್ರೀತಿಸುತ್ತಿದ್ದ ಅವಳನ್ನೇ ಮದುವೆ ಆಗಬೇಕು ಅಂದುಕೊಂಡಿದ್ದ. ಆದರೆ, ವಿಧಿ ಲಿಖಿತ ಬೇರೆಯೇ ಇತ್ತು. ಅವನು ಅನಿವಾರ್ಯವಾಗಿ ರಶ್ಮಿಯನ್ನು ಮದುವೆಯಾಗುವ ಪರಿಸ್ಥಿತಿ ಎದುರಾಯಿತು. ಇಷ್ಟ ಇಲ್ಲದೇ ಇದ್ದರೂ ಅವಳ ಕೊರಳಿಗೆ ತಾಳಿ ಕಟ್ಟಬೇಕಾಗಿ ಬಂತು. ಇದರಿಂದ ಸೀನನ ತಾಯಿ ನೀಲಕ್ಕನಿಗೂ ಬೇಸರ ಆಗಿದೆ.

ಹೀಗಿರುವಾಗ ಸೀನನ ಮನೆ ಮುಂದೆ ಪಿಂಕಿ ತನ್ನ ತಂದೆಯೊಂದಿಗೆ ಬಂದು ನಿಂತಿದ್ದಾಳೆ. ಅವಳ ತಂದೆ ಸೀನ ಬೇಕು ಎಂದು ಅಣ್ಣಯ್ಯನ ಬಳಿ ಕೇಳುತ್ತಾನೆ. ಆಗ ಶಿವು ಸೀನನ ಮನೆಯೊಳಗಡೆ ಹೋಗಿ ಅಲ್ಲಿ ಸೀನನ ತಂದೆ ಮಾದಪ್ಪನ ಬಳಿ "ಸೀನನನ್ನು ಹುಡುಕಿಕೊಂಡು ಒಂದು ಹುಡುಗಿ ಹಾಗೇ ಆ ಹುಡುಗಿಯ ತಂದೆ ಬಂದಿದ್ದಾರೆ" ಎಂದು ಹೇಳುತ್ತಾನೆ. ಆ ಮ...