ಭಾರತ, ಮಾರ್ಚ್ 11 -- Annayya Serial: ಅಣ್ಣಯ್ಯ ಧಾರಾವಾಹಿಯಲ್ಲಿ ಶಿವು ಹಾಗೂ ಪಾರು ಇಬ್ಬರೂ ಮತ್ತೆ ಚಿಂತೆ ಮಾಡುವಂತಾಗಿದೆ. ಈ ಮನೆಯಲ್ಲಿ ಏನು ನಡೆಯುತ್ತಿದೆ ಎನ್ನುವ ವಿಷಯವನ್ನು ಅರ್ಥ ಮಾಡಿಕೊಳ್ಳಲು ಪಾರು ಪ್ರಯತ್ನಿಸುತ್ತಿದ್ದಾಳೆ. ಶಿವು ತನ್ನ ತಂಗಿ ರಶ್ಮಿ ಮದುವೆಗೆ ಸಾಲ ಮಾಡಿರುತ್ತಾನೆ. ಅದನ್ನೇ ಒಂದು ಅವಕಾಶ ಎಂದು ಭಾವಿಸಿಕೊಂಡ ವೀರಭದ್ರ ತನ್ನ ಉಪಾಯದಿಂದ ಶಿವು ಮನೆಯನ್ನು ಹರಾಜಿಗೆ ಹಾಕುತ್ತಾನೆ. ಮನೆ ಪತ್ರ ಅಡ ಇಟ್ಟು ಶಿವು ಸಾಲ ತೆಗೆದುಕೊಂಡಿದ್ದಾನೆ ಎನ್ನುವ ರೀತಿಯಲ್ಲಿ ಎಲ್ಲವನ್ನೂ ಬಿಂಬಿಸಲಾಗುತ್ತದೆ. ಸಾಲ ತೆಗೆದುಕೊಂಡು ಇನ್ನೂ ಒಂದು ತಿಂಗಳೂ ಕಳೆದಿರುವುದಿಲ್ಲ. ಆದರೆ ಅಷ್ಟರಲ್ಲೇ ನೋಟಿಸ್ ಬರುವಂತೆ ಮಾಡುತ್ತಾರೆ.

ರಾಣಿ ಗಾಬರಿಯಾಗಿ ಅಣ್ಣ ಹಾಗೂ ಅತ್ತಿಗೆ ಪಾರು ಮಾತನ್ನು ಕೇಳುತ್ತಾ ನಿಲ್ಲುತ್ತಾಳೆ. ಪಾರು ಪತ್ರವನ್ನು ಓದಿದ ನಂತರ ಅವಳಿಗೆ ಸತ್ಯದ ಅರಿವಾಗುತ್ತದೆ. ನಾಳೆಯೇ ನಾವು ಮನೆ ಖಾಲಿ ಮಾಡಬೇಕಾದ ಪರಿಸ್ಥಿತಿ ಬರಬಹುದು ಎಂದು ಹೇಳುತ್ತಾಳೆ. ಅದನ್ನು ಕೇಳಿ ರಾಣಿ ಕಣ್ಣೀರಿಡುತ್ತಾ ಇದ್ದಾಳೆ. ಪಾರುಗೆ ಅನು...