ಭಾರತ, ಮಾರ್ಚ್ 4 -- ಅಣ್ಣಯ್ಯ ಧಾರಾವಾಹಿಯಲ್ಲಿ ಶಿವು ಹಾಗೂ ಅವನ ಮನೆಯವರೆಲ್ಲರೂ ತುಂಬಾ ಸಂತೋಷದಿಂದ ಸಮಯ ಕಳೆಯುತ್ತಾ ಇರುತ್ತಾರೆ. ರಶ್ಮಿಯನ್ನು ಮದುವೆಯಾಗಿರುವುದು ಸೀನನಿಗೆ ಇಷ್ಟ ಇಲ್ಲದೇ ಇದ್ದರೂ ಎಲ್ಲರೂ ಹೇಳಿದಂತೆ ಕೇಳಲೇಬೇಕಾದ ಅನಿವಾರ್ಯತೆ ಕೂಡ ಇದೆ. ಹೀಗಿರುವಾಗ ಅವನು ಹೊಂದಿಕೊಂಡವನಂತೆ ನಾಟಕ ಮಾಡುತ್ತಾ ಇದ್ದಾನೆ. ರಶ್ಮಿಗೆ ಸೀನನ ವರ್ತನೆಯಿಂದ ತುಂಬಾ ಬೇಸರ ಆಗಿದೆ. ಆದರೂ ಅದನ್ನು ತೋರಿಸಿಕೊಳ್ಳದೆ, ಏನೂ ಮಾತಾಡದೇ ಸುಮ್ಮನೆ ಬೇರೆಯವರು ಏನು ಹೇಳುತ್ತಾರೋ ಅದನ್ನು ಕೇಳುತ್ತಿದ್ದಾಳೆ. ಈಗ ಅವಳು ಗಂಡನ ಮನೆಯಿಂದ ತವರಿಗೆ ಬಂದಿದ್ದಾಳೆ. ಅಲ್ಲಿ ಕೆಲವೊಂದು ಆಟ ಆಡಿಸುತ್ತಾ ಇದ್ದಾರೆ.

ಪಾರು ತಾನು ಹೇಳಿದಂತೆಯೇ ರಶ್ಮಿ ಜೋಡಿ ಮಾಡಬೇಕು ಎಂದು ಹೇಳಿದ್ದಾಳೆ. ಎಲ್ಲರ ಮುಂದೆಯೇ ಮದುವೆಯ ನಂತರ ಆಡುವ ಆಟಗಳು ಅಂದರೆ ಉಂಗುರ ಹುಡುಕುವುದು, ಮಲ್ಲಿಗೆ ಚೆಂಡಿನ ಆಟ, ಇದೇ ರೀತಿ ಒಂದೇ ಕೈಯಲ್ಲಿ ಗಂಡನ ಅಂಗಿ ಗುಂಡಿ ಬಿಚ್ಚಿ, ನಂತರ ಅದನ್ನು ಮತ್ತೆ ಒಂದೇ ಕೈಯ್ಯಲ್ಲಿ ಹಾಕಬೇಕು ಎನ್ನುವ ಆಟ ಆಡಬೇಕು ಎಂದಿದ್ದಾಳೆ. ಅದನ್ನು ಕೇಳಿ ಸೀನನಿಗೆ...