ಭಾರತ, ಫೆಬ್ರವರಿ 24 -- ಅಣ್ಣಯ್ಯ ಧಾರಾವಾಹಿಯಲ್ಲಿ ಶಿವು ಹಾಗೂ ಪಾರುನೇ ಮುಂದೆ ನಿಂತು ರಶ್ಮಿ ಮದುವೆ ಮಾಡಿಸುತ್ತಾ ಇರುತ್ತಾರೆ. ಆದರೆ, ಕಾರಣಾಂತರಗಳಿಂದಾಗಿ ರಶ್ಮಿ ಮದುವೆ ನಿಲ್ಲುವ ಸಂದರ್ಭ ಬರುತ್ತದೆ. ಆದರೂ ಗಂಡಿನ ಕಡೆಯವರು ಅಣ್ಣಯ್ಯನ ಒತ್ತಾಯಕ್ಕೆ ಮಣಿದು ಮತ್ತೆ ಮದುವೆಗೆ ಒಪ್ಪುತ್ತಾರೆ. ಆದರೆ ಈ ಬಾರಿ ಪಾರುನೇ ಮದುವೆ ತಡೆದಿದ್ದಾಳೆ. ಅಣ್ಣಯ್ಯ ಈ ಹಿಂದೆಯೇ ಗಂಡಿನ ಕಡೆಯವರಿಗೆ ಮಾತು ಕೊಟ್ಟಿರುತ್ತಾನೆ. ತಾನು ಮದುವೆಯೊಳಗಡೆ 10 ಲಕ್ಷ ಹಣವನ್ನು ಹೊಂದಿಸಿ ನಿಮಗೆ ನೀಡುತ್ತೇನೆ ಎಂದು. ಆದರೆ, ಮದುವೆ ನಡೆಯುವಷ್ಟರಲ್ಲಿ ಅಂದರೆ ಇನ್ನೇನು ರಶ್ಮಿ ಕೊರಳಿಗೆ ತಾಳಿ ಕಟ್ಟಬೇಕು ಎನ್ನುವ ಸಂದರ್ಭದಲ್ಲಿ ಗಂಡಿನ ತಂದೆ ಬಂದು ಶಿವು ಬಳಿ "ಹಣ ಎಲ್ಲಿ?" ಎಂದು ಪ್ರಶ್ನೆ ಮಾಡುತ್ತಾನೆ. ಹಣ ಹೊಂದಿಸಿದ್ದೇನೆ ಈಗಲೇ ಕೊಡುತ್ತೇನೆ ಎಂದು ಶಿವು ಹೇಳುತ್ತಾನೆ. ಆದರೆ ಅವರು ಮೊದಲು ಒಪ್ಪುವುದಿಲ್ಲ.

ಪಾರುಗೆ ಈ ವರದಕ್ಷಿಣೆ ವಿಚಾರ ತಿಳಿದಿರುವುದಿಲ್ಲ. ಅದರಲ್ಲೂ 10 ಲಕ್ಷ ರೂಪಾಯಿ ಹಣವನ್ನು ಕೇಳಿದ್ದಾರೆ ಎಂಬ ವಿಚಾರದ ಬಗ್ಗೆ ಯಾವುದೇ ಸುಳಿವೂ ಇರ...