ಭಾರತ, ಫೆಬ್ರವರಿ 1 -- ಅಣ್ಣಯ್ಯ ಧಾರಾವಾಹಿಯಲ್ಲಿ ಅಣ್ಣಯ್ಯ ಹಾಗೂ ಪಾರು ಇಬ್ಬರೂ ಒಂದಾಗುವ ಸಮಯ ಹತ್ತಿರ ಬರುತ್ತಿದೆ. ಪಾರುಗೆ ಶಿವು ಮೇಲೆ ನಿಜವಾಗಿಯೂ ಪ್ರೀತಿ ಆಗಿದೆ. ಆದರೆ ಅದನ್ನು ಹೇಗೆ ವ್ಯಕ್ತಪಡಿಸಬೇಕು ಎಂದು ಅವಳಿಗೆ ಅರ್ಥ ಆಗುತ್ತಿಲ್ಲ. ತಾನೇ ಮೊದಲು ಪ್ರೇಮ ನಿವೇದನೆ ಮಾಡಿಕೊಂಡರೆ ಶಿವು ಅದನ್ನು ಹೇಗೆ ಸ್ವೀಕರಿಸುತ್ತಾನೆ ಎಂದೂ ಸಹ ಅವಳಿಗೆ ಗೊತ್ತಾಗುತ್ತಿಲ್ಲ. ಆ ಕಾರಣಕ್ಕಾಗಿ ನಿಧಾನವಾಗಿ ಅವಳು ಬೇರೆ ಬೇರೆ ಉಪಾಯಗಳನ್ನು ಬಳಸಿಕೊಂಡು ಶಿವುಗೆ ಹತ್ತಿರವಾಗಲು ನೋಡುತ್ತಿದ್ದಾಳೆ. ಪಾರು ಅಂದುಕೊಂಡಂತೆ ಎಲ್ಲ ಆದರೆ ಶಿವು ಮತ್ತು ಪಾರು ಇಬ್ಬರ ಜೀವನವೂ ಹಸನಾಗುತ್ತದೆ.

ಶಿವು ಪ್ರತಿದಿನ ನೆಲಕ್ಕೆ ಮಲಗಿಕೊಳ್ಳುತ್ತಾ ಇರುತ್ತಾನೆ. ಆ ವಿಚಾರ ಮಂಜಿ ಹಾಗೂ ರಾಣಿಗೆ ಗೊತ್ತಾಗಿದೆ. ಅವರಿಬ್ಬರೂ ಶಿವು ಮತ್ತು ಪಾರುವನ್ನು ಒಂದು ಮಾಡಲು ನಾನಾ ರೀತಿಯ ಉಪಾಯ ಮಾಡುತ್ತಿದ್ದಾರೆ. ಕಿಟಕಿಯ ಬಳಿ ಬಂದು ನಿಂತು ಒಳಗಡೆ ಏನಾಗುತ್ತಿದೆ ಎನ್ನುವುದನ್ನು ಅವರು ಗಮನಿಸುತ್ತಾ ಇದ್ದಾರೆ. ಹೀಗಿರುವಾಗ ಪಾರು ಮೊದಲು ಮಾತು ಆರಂಭಿಸುತ್ತಾಳೆ. "ಮಾವಾ ...