ಭಾರತ, ಫೆಬ್ರವರಿ 6 -- ಅಣ್ಣಯ್ಯ ಧಾರಾವಾಹಿಯಲ್ಲಿ ರಶ್ಮಿ ಮದುವೆ ತಯಾರಿ ಜೋರಾಗಿದೆ. ಅಣ್ಣಯ್ಯ ಹಾಗೂ ತಂಗಿಯರೆಲ್ಲ ತುಂಬಾ ಸಂತಸದಿಂದ ಮನೆಯನ್ನು ಸಜ್ಜು ಮಾಡುತ್ತಾ ಇದ್ದಾರೆ. ರಶ್ಮಿ ಕೂಡ ತನ್ನ ಬಗ್ಗೆ ತಾನು ಕಾಳಜಿ ಮಾಡಿಕೊಳ್ಳುತ್ತಿದ್ದಾಳೆ. ಹೀಗಿರುವಾಗ ಶಿವು ದೇವಸ್ಥಾನಕ್ಕೆ ಹೋಗಿ ರಶ್ಮಿ ಮದುವೆ ಹೇಳಿಕೆಯಲ್ಲಿ ಕಾಣಿಕೆ ಹಾಕುತ್ತಾನೆ. ಅದಕ್ಕೂ ಮುನ್ನ ತನ್ನ ಮಾವನ ಮನೆಗೆ ಹೋಗಿ ಅಲ್ಲಿ ಕೂಡ ಹಣ್ಣು ಕಾಯಿ ಬಟ್ಟಲನ್ನು ಕೊಂಡೊಯ್ಯುತ್ತಾನೆ. ಬಟ್ಟಲಿನಲ್ಲಿ ಅವರೆಲ್ಲ ಹಣ ಹಾಕುತ್ತಾರೆ. ಅವರು ನೀಡಿದ ಕಾಣಿಕೆಯನ್ನೂ ಸಹ ಶಿವು ತಂದಿರುತ್ತಾನೆ.

ದೇವಸ್ಥಾನಕ್ಕೆ ಪಾರು ಜತೆಗೂಡಿ ಬಂದ ಶಿವು ಕಾಣಿಕೆಯನ್ನು ದೇವರಿಗೆ ಅರ್ಪೀಸುವ ಸಲುವಾಗಿ ಕಾಣಿಕೆ ಹುಂಡಿಗೆ ಮೊದಲು ಮಾವ ಕೊಟ್ಟ ಹಣವನ್ನು ಹಾಕುತ್ತಾನೆ. ಅದಾದ ನಂತರದಲ್ಲಿ ಅತ್ತೆ ಕೊಟ್ಟ ಒಂದು ನೋಟನ್ನು ಹಾಕಲು ಮುಂದಾಗುತ್ತಾನೆ. ಆದರೆ ಆ ನೋಟಿನ ಮೇಲೆ ಏನೋ ಒಂದಷ್ಟು ಅಕ್ಷರಗಳಿರುವಂತೆ ಪಾರುಗೆ ಕಾಣಿಸುತ್ತದೆ. ಅವಳು ಆ ನೋಟನ್ನು ದಿಟ್ಟಿಸುತ್ತಾಳೆ. ಅಷ್ಟರಲ್ಲಿ ಅರ್ಧ ನೋಟನ್ನು ಅವನು ಕಾಣಿಕ...