ಭಾರತ, ಮಾರ್ಚ್ 24 -- Annayya Serial: ಅಣ್ಣಯ್ಯ ಧಾರಾವಾಹಿಯಲ್ಲಿ ವೀರಭದ್ರನಿಗೆ ಪಾರು ಮತ್ತು ಶಿವು ಇಷ್ಟ ಇಲ್ಲದೆ ಸಂಸಾರ ಮಾಡುತ್ತಿದ್ದಾರೆ ಎನ್ನುವ ವಿಚಾರ ಗೊತ್ತಿರಲಿಲ್ಲ. ಆದರೆ, ಲಾಯರ್ ಆಡಿದ ಮಾತಿನಿಂದಾಗಿ ವೀರಭದ್ರನಿಗೆ ಸತ್ಯ ಗೊತ್ತಾಗಿದೆ. ಹಾಗಾಗಿ ವೀರಭದ್ರ ಇನ್ನಷ್ಟು ಖುಷಿಯಲ್ಲಿದ್ದಾನೆ. ಹೇಗಾದರೂ ಮಾಡಿ ತನ್ನ ಮಗಳು ಹಾಗೂ ಅಳಿಯನನ್ನು ಬೇರೆ ಮಾಡುವುದೇ ಅವನ ಉದ್ದೇಶ ಆಗಿತ್ತು. ಆದರೆ, ಪಾರು ಮತ್ತು ಶಿವು ದೇವಸ್ಥಾನಕ್ಕೆ ಹೋಗಿದ್ದಾರೆ. ಪಾರುಗೆ ತಾನು ತನ್ನ ಪ್ರೀತಿಯನ್ನು ಹೇಳಿಕೊಂಡು ಇನ್ನು ಮುಂದಿನ ದಿನದಲ್ಲಿ ಚೆನ್ನಾಗಿ ಸಂಸಾರ ಮಾಡಬೇಕು ಎಂದು ಅಂದುಕೊಂಡಿದ್ದಾಳೆ. ಅಷ್ಟರಲ್ಲಿ ಆಪತ್ತು ಕಾದಿದೆ.

ಶಿವು ಹಾಗೂ ಪಾರು ದೇವಸ್ಥಾನಕ್ಕೆ ಬಂದಿರುತ್ತಾರೆ. ಪಾರು, ತುಂಬಾ ಖುಷಿಯಿಂದ ದೇವರ ಮುಂದೆ ನಿಂತು ಪ್ರಾರ್ಥನೆ ಮಾಡುತ್ತಾಳೆ. ನಂತರ ಪ್ರಸಾದ ರೂಪದಲ್ಲಿ ಸಿಕ್ಕಿದ ಮಲ್ಲಿಗೆ ಹೂವನ್ನು ಶಿವು ಹತ್ತಿರ ಮುಡಿಸಲು ಕೇಳುತ್ತಾಳೆ. ಶಿವು ಕೂಡ ಮುಡಿಸುತ್ತಾನೆ. ಆದರೆ ಮುಡಿಸುವ ಹೂವು ಬಿದ್ದು ಹೋಗುತ್ತದೆ. ದೇವಸ್ಥಾನದ ಅರ್ಚಕ...