ಭಾರತ, ಫೆಬ್ರವರಿ 19 -- ಅಣ್ಣಯ್ಯ ಧಾರಾವಾಹಿಯಲ್ಲಿ ಶಿವು ಮದುವೆಯ ಎಲ್ಲ ತಯಾರಿ ಮಾಡಿಕೊಂಡಿರುತ್ತಾನೆ. ನಂತರ ಅಲ್ಲಿಗೆ ಸೋಮೇಗೌಡ ಕೂಡ ಬರುತ್ತಾನೆ. ಬಂದವನೇ ಮದುವೆ ಬಗ್ಗೆ ಕೊಂಕು ಮಾತಾಡಲು ಆರಂಭಿಸುತ್ತಾನೆ. ಬೇಕು ಎಂದೇ "ತುಂಬಾ ಹಣ ಖರ್ಚುಮಾಡಿ ಮದುವೆ ಮಾಡ್ತಿದೀಯ ಬಿಡು. ನಮ್ಮ ಮನೆಯಲ್ಲಿ ಆಗುವ ಒಂದು ಮದುವೆ ಹಣದಲ್ಲಿ ಇಂತಹ 30 ಮದುವೆ ಮಾಡ್ಬೋದು" ಎಂದು ಹೇಳುತ್ತಾನೆ. ಆಗ ಶಿವುಗೆ ಏನು ಉತ್ತರ ನೀಡಬೇಕು ಎಂದು ಅರ್ಥ ಆಗುವುದಿಲ್ಲ. ಆದರೆ, ತನ್ನ ಬಳಿ ಆಗೋದೆ ಇಷ್ಟು ಎಂದು ಅವನಿಗೆ ಬೇಸರ ಆಗುತ್ತದೆ. ಅಷ್ಟರಲ್ಲಿ ಅಲ್ಲಿಗೆ ಪಾರು ಬರುತ್ತಾಳೆ. ಬಂವಳೇ ಶಿವು ಪರವಾಗಿ ಮಾತು ಆರಂಭಿಸುತ್ತಾಳೆ. ಅವಳು ಬೇಕು ಎಂದೇ ವೀರಭದ್ರ ಕುಳಿತಲ್ಲಿ ಶಿವುನಾ ಕೂರಿಸುತ್ತಾಳೆ. ನೀನು ಮಾವನ ಪಕ್ಕ ಕುಳಿತುಕೋ ಎನ್ನುತ್ತಾಳೆ. ಒತ್ತಾಯ ಮಾಡಿ ಶಿವುವನ್ನು ನೂಕಿ ಅಲ್ಲಿ ಕೂರಿಸುತ್ತಾಳೆ. ಆದ್ರೆ, ಶಿವುಗೆ ಇದು ಇಷ್ಟ ಆಗೋದಿಲ್ಲ. ಆದರೂ ಹೇಗೋ ಅಂಚಿನಲ್ಲಿ ಕೂರುತ್ತಾನೆ.

ಇನ್ನು ಶಿವು ತಾಯಿ ಮದುವೆ ಮನೆಗೆ ಬಂದರೂ ತಾನು ಬಂದಿದ್ದೇನೆ ಎಂದು ಅವಳು ಯಾರೊಂದಿಗ...