ಭಾರತ, ಫೆಬ್ರವರಿ 4 -- ಅಣ್ಣಯ್ಯ ಧಾರಾವಾಹಿಯಲ್ಲಿ ಶಿವು ತುಂಬಾ ಸಂತೋಷದಿಂದ ತನ್ನ ತಂಗಿ ಮದುವೆ ಮಾಡಲು ಸಿದ್ಧತೆ ನಡೆಸಿಕೊಳ್ಳುತ್ತಾ ಇರುತ್ತಾನೆ. ಆದರೆ ಅಲ್ಲಿ ಆಗೋದೇ ಬೇರೆ. ರಶ್ಮಿ ಗಂಡನಾಗುವವನು ಒಳ್ಳೆಯವನಲ್ಲ ಎಂಬ ಸತ್ಯ ಅವನಿಗೆ ತಿಳಿಯುತ್ತದೆ. ಅಣ್ಣಯ್ಯನ ಮನೆಯಲ್ಲಿ ಎಲ್ಲರೂ ಸಂಭ್ರಮದಿಂದ ರಶ್ಮಿ ಮದುವೆಯ ಲಗ್ನ ಪತ್ರಿಕೆಯ ಪೂಜೆ ಮಾಡುತ್ತಾರೆ. ಅಣ್ಣಯ್ಯ ತನ್ನ ತಂಗಿಯರಿಗೆ ಲಗ್ನ ಪತ್ರಿಕೆಗೆ ಅರಶಿನ, ಕುಂಕುಮ ಹಚ್ಚಲು ಹೇಳುತ್ತಾನೆ. ಅವರೆಲ್ಲರೂ ಖುಷಿಯಿಂದ ಒಪ್ಪಿಕೊಂಡು ಒಂದೊಂದೇ ಕೆಲಸ ಆರಂಭಿಸಿದ್ದಾರೆ. ಪಾರು ಕೂಡ ಕೈ ಜೋಡಿಸಿದ್ದಾಳೆ. ಶಿವು ತನ್ನ ಮಾವನ ಬಗ್ಗೆ ಅಪಾರ ಗೌರವ ಹೊಂದಿರುವ ಕಾರಣ, ಮೊದಲನೇ ಪತ್ರಿಕೆಯನ್ನು ಮಾವನಿಗೆ ಕೊಟ್ಟು ಬರುತ್ತೇನೆ ಎಂದು ಹೊರಡುತ್ತಾನೆ.

ಇನ್ನು ಇತ್ತ ರಶ್ಮಿ ತಾನು ಸಣ್ಣ ಆಗಬೇಕು ಎಂದು ತುಂಬಾ ಪ್ರಯತ್ನ ಮಾಡುತ್ತಾ ಇರುತ್ತಾಳೆ. ಜಿಮ್ ಸೀನ ಹೇಳಿದಂತೆ ತಾನು ಎಲ್ಲವನ್ನೂ ಕೇಳಬೇಕು ಡಯಟ್ ಕೂಡ ಮಾಡಬೇಕು ಎಂದು ಅಂದುಕೊಂಡಿರುತ್ತಾಳೆ. ಸೀನ ಕೂಡ ಅವಳ ಬಳಿ ಹಣ ತೆಗೆದುಕೊಂಡು, ಅವಳನ್ನು ಸಣ್ಣ ಮ...