ಭಾರತ, ಫೆಬ್ರವರಿ 24 -- ಅಣ್ಣಯ್ಯ ಧಾರಾವಾಹಿ ರಶ್ಮಿ ಮದುವೆ ನಿಲ್ಲಬಾರದು ಎಂದು ಶಿವು ಸಾಕಷ್ಟು ಪ್ರಯತ್ನ ಮಾಡುತ್ತಾ ಇದ್ದಾನೆ. ಆದರೆ, ಪಾರು ಆಲೋಚನೆ ಬೇರೆ ಇದೆ.

ವರದಕ್ಷಿಣೆ ತೆಗೆದುಕೊಂಡ ಮನೆಗೆ ಹೋದರೆ ರಶ್ಮಿ ಖಂಡಿತ ಸುಖವಾಗಿ ಬಾಳೋದಿಲ್ಲ. ಒಂದಲ್ಲ ಒಂದು ದಿನ ತೊಂದರೆ ಆಗುತ್ತದೆ. ಈ ಮದುವೆ ನಡೆಯೋದು ಬೇಡ ಎಂದು ಪಾರು ಹೇಳುತ್ತಾಳೆ.

ಆಗ ಶಿವು "ಪಾರು ನೀನೇ ಹೀಗೆ ಹೇಳಿದರೆ ಹೇಗೆ, ಬಾಸಿಂಗ ಕಟ್ಟಿದ ನನ್ನ ತಂಗಿ ಬಾಳು ಹಾಳಾಗಿ ಹೋಗ್ತಿದೆ ಸ್ವಲ್ಪ ಸುಮ್ನಿರು" ಎಂದು ಬೇಡಿಕೊಳ್ಳುತ್ತಾನೆ.

ವೀರಭದ್ರನಂತು ಕುಳಿತಲ್ಲೇ ಎಲ್ಲವನ್ನು ನೋಡುತ್ತ ಮಜ ತೆಗೆದುಕೊಳ್ಳುತ್ತಾ ಇರುತ್ತಾನೆ. ಅವನಿಗೇನು ಬೇಕೋ ಅದೇ ಆಗುತ್ತಿದೆ.

ತನ್ನ ಸೊಸೆ ಮಾತಾಡುವುದನ್ನು ಕಂಡು, ಅವಳ ನಿರ್ಧಾರ ಕಂಡು ಶಿವು ತಾಯಿ ದೂರದಲ್ಲೇ ನಿಂತು ಖುಷಿಪಡುತ್ತಾಳೆ.

ರಾಣಿ ಕೂಡ "ನಾನು ಅತ್ತಿಗೆ ಪರವಾಗಿ ಇದ್ದೇನೆ. ನಮ್ಮ ರಶ್ಮಿ ಚೆನ್ನಾಗಿರಬೇಕು ಎಂದರೆ ಈ ಮದುವೆ ಆಗಬಾರದು ಅಣ್ಣಾ" ಎಂದು ಹೇಳುತ್ತಾಳೆ.

ಪಾರು ಯಾರು ಏನೇ ಹೇಳಿದರೂ ತನ್ನ ನಿರ್ಧಾರವನ್ನು ಮಾತ್ರ ಬದಲಿ...