ಭಾರತ, ಫೆಬ್ರವರಿ 18 -- ಅಣ್ಣಯ್ಯ ಧಾರಾವಾಹಿಯಲ್ಲಿ ಶಿವು ತಾಯಿ ಮದುವೆ ಮನೆಗೆ ಬಂದಿದ್ದರೂ ಸಹ ತಾನು ಯಾರು ಎಂಬುದನ್ನು ಎಲ್ಲರ ಎದುರು ಹೇಳಿಕೊಂಡಿಲ್ಲ. ಮುಖ ಮುಚ್ಚಿಕೊಂಡೇ ಅಲ್ಲಿಗೆ ಬಂದಿದ್ದಾಳೆ. ರಶ್ಮಿ ಬಳೆ ಶಾಸ್ತ್ರದಲ್ಲಿ ತಾನೇ ರಶ್ಮಿ ಕೈಗೆ ಮೊದಲ ಬಳೆ ತೊಡಿಸಿದ್ದಾಳೆ. ಆದರೆ, ಆಗಲೂ ಅವಳು ವಸ್ತ್ರದಿಂದ ತನ್ನ ಮುಖವನ್ನು ಮುಚ್ಚಿಕೊಂಡೇ ಇದ್ದಳು. ಅದಾದ ನಂತರದಲ್ಲಿ ತಾನು ಎಲ್ಲರಿಗೂ ಸತ್ಯ ಹೇಳಲಾ? ಅಥವಾ ಮುಚ್ಚಿಡಲಾ? ಎಂದು ಆಲೋಚಿಸುತ್ತಾಳೆ. ಆಗ ಅವರೆಲ್ಲರ ಖುಷಿ ನೋಡಿ..ನಾನು ಇವರ ಸಂತೋಷವನ್ನು ಹಾಳು ಮಾಡುವುದು ಬೇಡ ಎಂದು ಅಂದುಕೊಳ್ಳುತ್ತಾಳೆ. ಪಾರುಗೆ ತಾನು ಶಿವು ಹತ್ತಿರವೇ ಮೊದಲ ಬಳೆ ತೊಡಿಸಿಕೊಳ್ಳಬೇಕು ಎಂಬ ಆಸೆ ಆಗುತ್ತದೆ. ಆ ಕಾರಣಕ್ಕಾಗಿ ಅವನು ಮೊದಲ ಬಳೆಯನ್ನು ಅವನಿಂದ ತೊಡಿಸಿಕೊಳ್ಳಲು ಪ್ರಯತ್ನ ಮಾಡುತ್ತಾಳೆ.

"ಪಾರು ಬೇಕು ಎಂದೇ ಬಳೆಗಾರನ ಬಳಿ ಹೆಂಡತಿಗೆ ಮೊದಲ ಬಳೆನಾ ಗಂಡಾನೇ ತೊಡಸಬೇಕಂತೆ ಆಗಲೇ ಅಣ್ಣ ಹೇಳಿದ್ರು" ಎಂದು ಸುಳ್ಳು ಹೇಳುತ್ತಾಳೆ. ನಂತರ ಬಳೆಗಾರನಿಗೆ ಸುಳ್ಳು ಹೇಳುವಂತೆ ಕಣ್ಸನ್ನೆ ಮಾಡುತ್ತಾಳೆ...