ಭಾರತ, ಫೆಬ್ರವರಿ 12 -- ಅಣ್ಣಯ್ಯ ಧಾರಾವಾಹಿಯಲ್ಲಿ ರಶ್ಮಿ ಮದುವೆ ಸಂಭ್ರಮ ಆರಂಭವಾಗಿದೆ. ಆದರೆ ಗಂಡಿನ ಕಡೆಯವರು ಕೇಳಿದಷ್ಟು ಹಣ ಹೊಂದಿಸುವುದು ಹೇಗೆ? ಎಂದು ಶಿವು ಆಲೋಚನೆ ಮಾಡುತ್ತಾ ಇದ್ದಾನೆ. ಹೀಗಿರುವಾಗ ಆ ವಿಚಾರ ಪಾರುಗೆ ತಿಳಿದು ಅವಳೇ ಎಲ್ಲಿಂದಲೋ ಒಂದಷ್ಟು ಹಣ ಹೊಂದಿಸಿಕೊಂಡು ಬಂದಿದ್ದಾಳೆ. ಆದರೆ ಶಿವುಗೆ ಪಾರು ಹೀಗೆಲ್ಲ ಮಾಡಬಹುದು ಎಂಬ ಆಲೋಚನೆಯೂ ಇರುವುದಿಲ್ಲ. ಪಾರು ಸುಮ್ಮನೆ ಶಿವು ಹಿಂದಿನಿಂದ ಬಂದು ಅವನ ಕಣ್ಣು ಮುಚ್ಚುತ್ತಾಳೆ. "ನಾನು ಯಾರು ಎಂದು ಕಂಡು ಹಿಡಿ ನೋಡೋಣ" ಎಂದು ಸವಾಲು ಹಾಕುತ್ತಾಳೆ. ಆಗ ಶಿವು ಗೊತ್ತಿದ್ದೋ, ಗೊತ್ತಿಲ್ಲದೆಯೋ.. ಬೇರೆ ಬೇರೆ ಹೆಸರುಗಳನ್ನು ಹೇಳುತ್ತಾನೆ. ಆಗ ಪಾರುಗೆ ಕೋಪ ಬರುತ್ತದೆ. "ಏ..ಅವರೆಲ್ಲ ಯಾರೂ ಅಲ್ಲ. ನಾನು ಪಾರು" ಎಂದು ಅವಳೇ ಹೇಳುತ್ತಾಳೆ. ನಂತರ ಕಣ್ಣು ತೆಗೆದು ನೋಡಿದರೆ ಅಲ್ಲಿ ಇರೋದು ಪಾರು ಎಂದು ಶಿವುಗೂ ಅರ್ಥ ಆಗುತ್ತದೆ. ಅವಳು ಶಿವು ಹತ್ತಿರ "ನೀನು ಕಣ್ಣು ಮುಚ್ಚಿಕೊಂಡೇ ಇರು, ಕಣ್ಣು ಬಿಡಬೇಡ" ಎಂದು ಹೇಳುತ್ತಾಳೆ.

ನಂತರ ಶಿವು ಕಣ್ಣು ಬಿಟ್ಟಾಗ ಪಾರು ಕೈಯ್ಯಲ್...