ಭಾರತ, ಫೆಬ್ರವರಿ 27 -- ಅಣ್ಣಯ್ಯ ಧಾರಾವಾಹಿಯಲ್ಲಿ ರಶ್ಮಿ ಮದುವೆಯಾಗಿ ತನ್ನ ಗಂಡನ ಮನೆಗೆ ಬಂದಿದ್ದಾಳೆ. ಮಾದಪ್ಪಣ್ಣನ ಒತ್ತಾಯಕ್ಕೆ ಆದ ಈ ಮದುವೆ ಅವನ ಮನೆಯಲ್ಲಿ ಯಾರಿಗೂ ಇಷ್ಟ ಇಲ್ಲ. ರಶ್ಮಿ ಚಿಕ್ಕವಳಿದ್ದಾಗಿನಿಂದ ನೋಡಿದ ಪಕ್ಕದ ಮನೆಯವರೇ ಅವಳಿಗೆ ಈಗ ಅತ್ತೆ, ಮಾವ ಆಗಿದ್ದಾರೆ. ಸೀನ ಹಾಗೂ ರಶ್ಮಿ ಇಬ್ಬರೂ ಯಾವಾಗಲೂ ಕಚ್ಚಾಡುತ್ತಲೇ ಇದ್ದವರು ಈಗ ಮದುವೆಯಾಗಿದ್ದಾರೆ. ಅಣ್ಣಯ್ಯ ತುಂಬಾ ಖುಷಿಯಲ್ಲಿದ್ದಾನೆ. ಅಂತೂ ರಶ್ಮಿಗೆ ಹಸೆಮಣೆಯಲ್ಲಿ ಮೋಸ ಆಗಿಲ್ಲ ಎಂದು ಅಂದುಕೊಳ್ಳುತ್ತಾ ಇದ್ದಾನೆ. ಪಾರು ಹಾಗೂ ನಾದಿನಿಯರೆಲ್ಲರೂ ಖುಷಿಯಲ್ಲಿದ್ದಾರೆ. ಸೀನನಾದರೂ ಮುಂದೆ ಬಂದು ಮದುವೆ ಆದ ಎಂಬ ಸಮಾಧಾನ ಅವರಿಗಿದೆ.

ಇನ್ನು ಶಿವು ತಾಯಿ ದೂರದಿಂದಲೇ ನಿಂತು ರಶ್ಮಿ ಮದುವೆಯನ್ನು ಕಣ್ತುಂಬಿಕೊಂಡಿದ್ದಾಳೆ. ವೀರಭದ್ರನಿಗಂತೂ ತುಂಬಾ ಕೋಪ ಬಂದಿದೆ. ಈ ಮದುವೆ ಆಗಬಾರದು ಎಂದು ಅವನು ತುಂಬಾ ಪ್ರಯತ್ನ ಮಾಡಿದ್ದ ಆದರೂ ಈ ಮದುವೆ ನಡೆಯಿತಲ್ಲ ಎಂದು ಕೋಪ ಮಾಡಿಕೊಂಡು ಅವನು ಮದುವೆ ಮನೆಯಿಂದ ಹೊರಟು ಹೋಗಿದ್ದಾನೆ. ಅಣ್ಣಯ್ಯನ ಜೀವನವನ್ನು ಕಷ್ಟದಲ್ಲಿ ಸಿ...