ಭಾರತ, ಫೆಬ್ರವರಿ 25 -- ಅಣ್ಣಯ್ಯ ಧಾರಾವಾಹಿಯಲ್ಲಿ ಶಿವು ತನ್ನ ತಂಗಿಯರ ಪರಿಸ್ಥಿತಿ ನೋಡಿ ತುಂಬಾ ಕಂಗಾಲಾಗಿದ್ದಾನೆ. ತನ್ನ ಕಣ್ಣಿಂದ ಇದೆಲ್ಲವನ್ನು ನೋಡಲು ಸಾಧ್ಯವೇ ಇಲ್ಲ ಎಂದು ಎಲ್ಲರೆದುರು ಕಣ್ಣೀರಿಡುತ್ತಿದ್ದಾನೆ. ಸಾಕಷ್ಟು ಜನ ನೆರೆದಿರುವ ಆ ಮದುವೆ ಮನೆಯಲ್ಲಿ ಎಲ್ಲರ ಎದುರು ಅವಮಾನ ಅನುಭವಿಸುತ್ತಾ ಇದ್ದಾನೆ. ಆದರೆ ಪಾರು ಮಾತ್ರ ಯಾವುದೇ ಕಾರಣಕ್ಕೂ ವರದಕ್ಷಿಣೆ ಕೊಡೋದು ಬೇಡ. ಈ ಸಂಬಂಧವೂ ನಮಗೆ ಬೇಡ ಎಂದು ಹೇಳುತ್ತಿದ್ದಾಳೆ. ಆ ಕಾರಣಕ್ಕಾಗಿ ಶಿವುಗೆ ಇನ್ನಷ್ಟು ಬೇಸರವಾಗಿದೆ. ಹೇಗಾದರೂ ಮಾಡಿ ಗಂಡಿನ ಮನೆಯವರ ಕಾಲು ಹಿಡಿದಾದರೂ ತಾನು ಒಪ್ಪಿಸುತ್ತಿದ್ದೆ ಎಂದು ಹೇಳುತ್ತಿದ್ದಾನೆ. ಆದರೆ ಅಣ್ಣಯ್ಯನ ಉಳಿದ ತಂಗಿಯರೂ ಸಹ ಈ ಮದುವೆ ಬೇಡ ಎಂದೇ ಹೇಳಿದ್ದಾರೆ.

ಆಗ ಅಣ್ಣಯ್ಯ "ರತ್ನಾಳ ನಿಶ್ಚಿತಾರ್ಥವೇ ಮುರಿದು ಹೋಯ್ತು ಈಗ ನೋಡಿದರೆ ರಶ್ಮಿಯ ಮದುವೆಯೇ ಮುರಿದು ಹೋಗ್ತಿದೆ. ನಾನಾದ್ರೂ ಏನ್ ಮಾಡ್ಲೀ?" ಎಂದು ಕೇಳುತ್ತಾ ಅಳುತ್ತಾನೆ. ಆಗ ಮಾದಪ್ಪಣ್ಣನಿಗೆ ಶಿವು ಮೇಲೆ ಕನಿಕರ ಹುಟ್ಟುತ್ತದೆ. ನಿನ್ನ ತಂಗಿಯನ್ನು ನನ್ನ ಮನೆ ಸೊಸೆ ಮ...