ಭಾರತ, ಮಾರ್ಚ್ 5 -- ಅಣ್ಣಯ್ಯ ಧಾರಾವಾಹಿಯಲ್ಲಿ ರಶ್ಮಿ ಮೊದಲಿನಂತೆ ಇರುವುದಿಲ್ಲ. ಇನ್ನು ಮುಂದೆ ಅತ್ತೆಯ ಕಾಟ ಸಹಿಸಿಕೊಂಡು ಸೀನನ ತಿರಸ್ಕಾರವನ್ನು ತಾಳಿಕೊಂಡೇ ಬದುಕುತ್ತಾಳೆ ಎಂದು ಪ್ರೇಕ್ಷಕರು ಅಂದುಕೊಂಡಿದ್ದರು. ರಶ್ಮಿ ಮೊದಲಿನ ಹಾಗೇ ಇರಬೇಕು ಎಂದು ಹಲವರು ಅಂದುಕೊಂಡಿದ್ದರು. ಆದರೆ, ರಶ್ಮಿ ತಮ್ಮ ಮೊದಲಿನ ಅವತಾರವನ್ನು ಮತ್ತೆ ತೋರಿಸಿದ್ದಾಳೆ. ರಶ್ಮಿ ಹಾಗೂ ಸೀನನ ಮೊದಲನೇ ರಾತ್ರಿ ದಿನವೇ ಇಬ್ಬರೂ ಜಗಳ ಮಾಡಿಕೊಂಡಿದ್ಧಾರೆ. ಶಾಸ್ತ್ರದ ಪ್ರಕಾರ ಮೊದಲು ಸೀನ ಕೋಣೆಯ ಒಳಗಡೆ ಹೋಗುತ್ತಾನೆ. ಅದಾದ ನಂತರದಲ್ಲಿ ರಶ್ಮಿ ಹಾಲು ಹಿಡಿದುಕೊಂಡು ಹೋಗುತ್ತಾಳೆ. ಅವಳು ಹಾಲು ಹಿಡಿದುಕೊಂಡು ಒಳಗಡೆ ಹೋಗಿ, ಹಾಲಾದ್ರೂ ಕುಡಿ ಎಂದು ಹೇಳುತ್ತಾಳೆ. ಆಗ ಸೀನ "ನನ್ನ ಜೀವನಕ್ಕೇ ನೀನು ಹಾಲು, ತುಪ್ಪ ಬಿಟ್ಟಾಗಿದೆ. ಮತ್ತೆ ಹಾಲು ಕುಡಿ ಅಂತೀಯಾ?" ಎಂದು ಪ್ರಶ್ನೆ ಮಾಡಿದ್ದಾನೆ.

ಆ ಮಾತನ್ನು ಕೇಳಿ ರಶ್ಮಿ ತುಂಬಾ ಕೋಪ ಮಾಡಿಕೊಂಡಿದ್ದಾಳೆ. ಅವರಿಬ್ಬರ ನಡುವೆ ಇನ್ನಷ್ಟು ಮಾತುಕತೆಯಾಗಿದೆ. ಒಬ್ಬರನ್ನು ಕಂಡರೆ ಇನ್ನೊಬ್ಬರಿಗೆ ಆಗದು ಎನ್ನುವ ರೀತಿಯಲ್...