ಭಾರತ, ಮಾರ್ಚ್ 25 -- ಅಣ್ಣಯ್ಯ ಧಾರಾವಾಹಿಯಲ್ಲಿ ಶಿವು ಹಾಗೂ ಪಾರು ಇಬ್ಬರೂ ಬೇರೆ ಆಗುವುದನ್ನೇ ಬಯಸುತ್ತಿದ್ದ ವೀರಭದ್ರನಿಗೆ ತುಂಬಾ ಸುಲಭವಾಗಿ ಪಾರು ಡಿವೋರ್ಸ್ ಬೇಕು ಎಂದು ಈ ಹಿಂದೆ ಹೇಳಿದ ವಿಚಾರ ಗೊತ್ತಾಗಿದೆ. ಅದನ್ನೊಂದನ್ನೇ ಇಟ್ಟುಕೊಂಡು ವೀರಭದ್ರನ ಊರವರ ಎದುರು ಪಾರು ಹಾಗೂ ಶಿವುಗೆ ಅವಮಾನ ಮಾಡಬೇಕು ಎಂದು ಬಯಸುತ್ತಾನೆ. ಆದರೆ, ಅವಮಾನ ಮಾಡಲು ಸಾಧ್ಯವಾಗುವುದಿಲ್ಲ. ಬದಲಾಗಿ ಶಿವುನೇ ವೀರಭದ್ರನಿಗೆ ಅವಮಾನ ಮಾಡುತ್ತಾನೆ. ವೀರಭದ್ರನ ತನ್ನ ಸ್ಥಾನಕ್ಕೆ ತಕ್ಕನಾದ ಯಾವ ಮಾತನ್ನೂ ಆಡುವುದಿಲ್ಲ. ಬದಲಾಗಿ ಸಂಸಾರ ಒಡೆಯುವ ಮಾತಾಡುತ್ತಾ ಇರುತ್ತಾನೆ.

ಶಿವುಗೆ ಮೊದಲೇ ತನ್ನ ತಾಯಿ ವಿಚಾರವಾಗಿ ಯಾರು ಮಾತಾಡಿದರೂ ಆಗೋದಿಲ್ಲ. ಹೀಗಿರುವಾಗ ವೀರಭದ್ರ ಶಿವು ತಾಯಿ ಹಾಗೂ ಪಾರು ಇಬ್ಬರಿಗೂ ಹೋಲಿಕೆ ಮಾಡಿ ಮಾತಾಡುತ್ತಾನೆ. ಆಗ ಶಿವು ಕೋಪ ನೆತ್ತಿಗೇರುತ್ತದೆ. ವೀರಭದ್ರ ಆಡಿದ ಮಾತುಗಳನ್ನು ಸಹಿಸಲಾಗದ ಶಿವು ತಾನೇ ವೀರಭದ್ರನಿಗೆ ತಿರುಗುತ್ತರ ನೀಡಿದ್ದಾನೆ. ಯಾಕೆಂದರೆ ವೀರಭದ್ರ ಶಿವು ತಾಯಿ ಓಡಿ ಹೋದ ಹಾಗೆ ಪಾರು ಕೂಡ ಓಡಿ ಹೋಗುತ್ತಾಳೆ ಎ...