ಭಾರತ, ಫೆಬ್ರವರಿ 17 -- ಅಣ್ಣಯ್ಯ ಧಾರಾವಾಹಿಯಲ್ಲಿ ಶಿವು ತಾಯಿ ಮನೆ ಬಿಟ್ಟು ಹೋಗಿ ತುಂಬಾ ವರ್ಷಗಳೇ ಆದಂತಿದೆ. ಆದರೆ ಯಾವ ಕಾರಣಕ್ಕೆ ಅವಳು ಮನೆ ಬಿಟ್ಟು ಹೋಗಿದ್ದಾಳೆ. ಅಥವಾ ಅದರ ಹಿಂದಿನ ಕಥೆ ಏನು? ಎಂಬುದನ್ನು ಇದುವರೆಗೂ ಎಲ್ಲೂ ಬಿಟ್ಟುಕೊಟ್ಟಿಲ್ಲ. ಹೀಗಿರುವಾಗ, ಶಿವು ತಾಯಿ ಜೈಲು ಸೇರಿದ ವಿಚಾರವೂ ಅಣ್ಣಯ್ಯ ಹಾಗೂ ಅಣ್ಣಯ್ಯನ ತಂಗಿಯರಿಗೆ ತಿಳಿದಿಲ್ಲ. ಶಿವು ತಂಗಿ ರಶ್ಮಿಯ ಮದುವೆ ಇರುವ ಸಂದರ್ಭದಲ್ಲಿ ಶಿವು ತಾಯಿ ಜೈಲಿನಿಂದ ಬಂದಿದ್ದಾಳೆ. ತಾನು ತನ್ನ ಮಗಳ ಮದುವೆಗೆ ಹೋಗಬೇಕು ಎಂದುಕೊಂಡು ಓಡೋಡಿ ಬಂದಿದ್ದಾಳೆ. ಈ ವಿಚಾರ ಇನ್ನೂ ವೀರಭದ್ರನಿಗೆ ಗೊತ್ತಾಗಿಲ್ಲ. ಹೀಗಿರುವಾಗ ಅವಳು ಬಂದು ಏನು ಮಾಡುತ್ತಾಳೆ? ಎಂಬ ಕುತೂಹಲವೂ ಪ್ರೇಕ್ಷಕರಲ್ಲಿದೆ. ಜೀ ಕನ್ನಡ ವಾಹಿನಿ ಹಂಚಿಕೊಂಡ ಪ್ರೋಮೋ ತುಣುಕಿನಲ್ಲಿ ಅಣ್ಣಯ್ಯ ಹಾಗೂ ಅಣ್ಣಯ್ಯನ ಕೊನೆತಂಗಿ ಇವರಿಬ್ಬರನ್ನು ಬಿಟ್ಟು ಎಲ್ಲರೂ ಹೋಗಿ ಅಮ್ಮನನ್ನು ತಬ್ಬಿಕೊಂಡಿದ್ದಾರೆ.

ಶಿವುಗೆ ತನ್ನ ತಾಯಿಯ ಮೇಲೆ ವಿಪರೀತ ಕೋಪ ಇದೆ ಎನ್ನುವುದು ಆಗಾಗ ವ್ಯಕ್ತವಾಗುತ್ತಲೇ ಇರುತ್ತದೆ. ಅದೇ ರೀತಿ ಈಗ...