ಭಾರತ, ಮಾರ್ಚ್ 7 -- ಅನಿವಾರ್ಯವಾಗಿ ಸೀನ ರಶ್ಮಿ ಕೊರಳಿಗೆ ತಾಳಿ ಕಟ್ಟುವ ಪ್ರಸಂಗ ಎದುರಾಗಿತ್ತು. ಆಗ ಏನು ಮಾಡಬೇಕು ಎಂದು ತೋಚದೆ ತಪ್ಪು ನಡೆದಿದೆ.

ಸೀನ ಹಾಗೂ ಅವನ ತಾಯಿ ಇಬ್ಬರಿಗೂ ಈ ಮದುವೆ ಇಷ್ಟ ಇರೋದಿಲ್ಲ. ಆದರೂ ಮಾದಪ್ಪಣ್ಣನ ಮಾತಿಗೆ ಕಟ್ಟುಬಿದ್ದು ಸೀನ ಮದುವೆಯಾಗಿರುತ್ತಾನೆ.

ರಶ್ಮಿಯನ್ನು ತನ್ನ ಮನೆಯಲ್ಲಿ ಇಟ್ಟುಕೊಳ್ಳಲು ಇಷ್ಟ ಇರದೇ ಇದ್ದರೂ ಲೀಲಾ ನಾಟಕ ಮಾಡಿಕೊಂಡು ಬದುಕುತ್ತಿದ್ದಾಳೆ.

ಮದುವೆಯ ಮರುದಿನವೇ ಎಲ್ಲರೂ ದೇವಸ್ಥಾನಕ್ಕೆ ಬಂದಿದ್ದಾರೆ. ಪೂಜಾರಿ "ಶಿವಣ್ಣ ಬಂದಿಲ್ವಾ?" ಎಂದು ಪ್ರಶ್ನೆ ಮಾಡುತ್ತಾರೆ.

ಆಗ ಅಲ್ಲಿಗೆ ಬಂದ ಪಿಂಕಿ ತಂದೆ "ಅವನ ತಂಗಿ ಮದುವೆಯಲ್ಲಿ ಏನೋ ಸಮಸ್ಯೆ ಆಯ್ತಂತಲ್ಲ ಪಾಪ" ಎನ್ನುತ್ತಾ ಸೀನನನ್ನು ಮಾತಾಡಿಸುತ್ತಾನೆ. ಪಿಂಕಿ ಮದುಮಗಳಂತೆ ರೆಡಿಯಾಗಿ ಬಂದಿದ್ದಾಳೆ.

ಸೀನ ಹಾಗೂ ಅವನ ಅಮ್ಮ ಇಬ್ಬರಿಗೂ ಪಿಂಕಿ ಹಾಗೂ ಅವನ ತಂದೆಯನ್ನು ನೋಡಿ ಭಯವಾಗಿದೆ. ಸತ್ಯವಂತು ಗೊತ್ತಾಗಲೇಬೇಕಿದೆ.

ರಶ್ಮಿ ದೇವಸ್ಥಾನಕ್ಕೆ ಪ್ರದಕ್ಷಿಣೆ ಹಾಕಿ ಬರಲು ಹೋದ ಕಾರಣ ಮೊದಲು ಪಿಂಕಿಗೆ ರಶ್ಮಿ ಸಿಗುವುದಿಲ್ಲ. ಸ...