ಭಾರತ, ಮಾರ್ಚ್ 7 -- ಅಣ್ಣಯ್ಯ ಧಾರಾವಾಹಿಯಲ್ಲಿ ಪಿಂಕಿ ತಾನು ಸೀನನನ್ನು ಮದುವೆಯಾಗಬೇಕು ಎಂದು ತುಂಬಾ ಉತ್ಸುಕಳಾಗಿದ್ದಾಳೆ. ದೇವಸ್ಥಾನಕ್ಕೆ ಸೀನನಿಗಿಂತ ಮೊದಲು ಬಂದು ಕಾದಿದ್ದಾಳೆ. ಆದರೆ ಸೀನ ಮದುವೆ ಆಗಿದ್ದಾನೆ ಎಂಬ ವಿಚಾರ ಅವಳಿಗಿನ್ನೂ ಗೊತ್ತಿಲ್ಲ. ಅಪ್ಪನಿಗೆ ಗೊತ್ತಾಗದ ಹಾಗೆ ಗುಟ್ಟಾಗಿ ಮದುವೆ ಆಗಬೇಕು ಎಂದು ಸೀನ ಅಂದುಕೊಂಡಿದ್ದ. ಅವನ ಜತೆ ನೀಲಕ್ಕ ಕೂಡ ಅದನ್ನೇ ಆಲೋಚಿಸಿದ್ದಳು, ಆದರೆ ಅಚಾನಕ್ ಆಗಿ ಸೀನ, ರಶ್ಮಿಯನ್ನು ಮದುವೆಯಾಗುವ ಹಾಗೆ ಆಗುತ್ತದೆ ಎಂದು ಯಾರೂ ಯೋಚಿಸಿರಲಿಲ್ಲ. ಮದುವೆಯ ಮರುದಿನ ಸೀನ ಹಾಗೂ ರಶ್ಮಿ ಮನೆಯವರೊಟ್ಟಿಗೆ ದೇವಸ್ಥಾನಕ್ಕೆ ಬಂದಿದ್ದಾರೆ.

ಇತ್ತ ಪಿಂಕಿ ಮದುಮಗಳ ರೀತಿ ಅಲಂಕಾರ ಮಾಡಿಕೊಂಡು ಸೀನನಿಗಾಗಿ ಕಾಯುತ್ತಿದ್ದಾಳೆ. ಅವಳಿಗೆ ಸತ್ಯ ಗೊತ್ತಾದರೆ ಏನಾಗುತ್ತದೆ ಎಂಬ ಕಲ್ಪನೆಯನ್ನೂ ಮಾಡಿಕೊಳ್ಳಲು ಸಾಧ್ಯವಿಲ್ಲ. ಆ ರೀತಿಯ ಪರಿಸ್ಥಿತಿ ಅಲ್ಲಿ ಎದುರಾಗಿದೆ. ಸೀನ ಹಾಗೂ ಅವನ ಮನೆಯವರೆಲ್ಲರೂ ದೇವಸ್ಥಾನಕ್ಕೆ ಬರುತ್ತಾರೆ. ರಶ್ಮಿ ತಾನು ದೇವಸ್ಥಾನದ ಸುತ್ತ ಒಂದು ಪ್ರದಕ್ಷಿಣೆ ಹಾಕಿಕೊಂಡು ಬರುತ್ತೇನ...