ಭಾರತ, ಫೆಬ್ರವರಿ 14 -- Annayya Serial: ಅಣ್ಣಯ್ಯ ಧಾರಾವಾಹಿಯಲ್ಲಿ ಅಣ್ಣಯ್ಯ ಹಾಗೂ ಮನೆಯ ಎಲ್ಲರೂ ಚೆನ್ನಾಗಿ ರೆಡಿಯಾಗಿ ರಶ್ಮಿ ಮದುವೆ ತಯಾರಿ ಮಾಡುತ್ತಿದ್ದಾರೆ. ಇನ್ನೇನು ಮದುವೆ ನಡೆಯುವ ಸಮಯವೂ ಹತ್ತಿರ ಬರುತ್ತಿದೆ. ಅರಶಿನ ಶಾಸ್ತ್ರ ಮುಗಿದಿದೆ. ಅರಶಿನ ಶಾಸ್ತ್ರ ಮಾಡುವಾಗ ಪಾರುನೇ ತಾಯಿ ಸ್ಥಾನದಲ್ಲಿ ನಿಂತುಕೊಂಡು ಮೊದಲು ಅರಶಿನ ಹಚ್ಚಿದ್ದಾಳೆ. ಈಗ ಬಳೆ ಶಾಸ್ತ್ರ ಮಾಡುತ್ತಿದ್ದಾರೆ. ಅಣ್ಣಯ್ಯನ ಎಲ್ಲ ತಂಗಿಯರೂ ತುಂಬಾ ಉತ್ಸಾಹದಿಂದ ಇದ್ದಾರೆ. ಆದರೆ ಬಳೆಗಾರ ಬಂದವನು ಹೆಣ್ಣಿನ ತಾಯಿನೇ ಮೊದಲ ಬಳೆ ತೊಡಿಸಬೇಕು ಎಂದು ಹೇಳಿದ್ದಾನೆ. ಆ ಮಾತನ್ನು ಕೇಳಿ ಶಿವುಗೆ ಕೆಂಡದಂತ ಕೋಪ ಬಂದಿದೆ.

"ತಾಯಿ ಅಂದ್ರೆ ಮಕ್ಕಳನ್ನು ಹೆತ್ರೆ ಆಗ್ಲಿಲ್ಲ. ಜತೆಗಿದ್ದು ಸಾಕ್ಬೇಕು ಎಂದು ಅವನು ಹೇಳುತ್ತಾ ಭಾವುಕನಾಗಿದ್ದಾನೆ. ಕ್ಷಣ ಕ್ಷಣವೂ ಎಲ್ಲರನ್ನೂ ನನ್ನ ಎದೆಯಲ್ಲಿಟ್ಟುಕೊಂಡು ಜೋಪಾನ ಮಾಡಿದವನು ನಾನು" ಎಂದು ಕೂಗಾಡಿದ್ದಾನೆ. ಆಗ ಪಾರು ಅವನ ಪಕ್ಕದಲ್ಲೇ ನಿಂತು ಸಮಾಧಾನ ಮಾಡುವ ಪ್ರಯತ್ನ ಮಾಡಿದ್ದಾಳೆ. ಆದರೆ ಅವನೊಳಗಿನ ಕೋಪ ಮಾತ್ರ ಕಡಿಮೆ...