ಭಾರತ, ಮಾರ್ಚ್ 9 -- ಅಣ್ಣಯ್ಯ ಧಾರಾವಾಹಿಯಲ್ಲಿ ರಶ್ಮಿ ಹಾಗೂ ಸೀನನ ಮದುವೆ ನಡೆದಿದೆ. ಅದೇ ಸಮಾಧಾನದಲ್ಲಿ ಅಣ್ಣಯ್ಯ ಇದ್ದಾನೆ. ಇನ್ನೇನು ಮದುವೆ ನಿಂತೇ ಹೋಗುತ್ತದೆ ಎನ್ನುವ ಸಂದರ್ಭಕ್ಕೆ ಸೀನ ಬಂದು ರಶ್ಮಿಗೆ ತಾಳಿ ಕಟ್ಟಿದ್ದಾನೆ ಎಂದು ಅಣ್ಣಯ್ಯ ಸಮಾಧಾನದಲ್ಲಿದ್ದಾನೆ. ಆದರೂ, ಮದುವೆಯಲ್ಲಿ ತೊಂದರೆ ಆಯಿತು ಎಂಬ ಅಸಮಾಧಾನವೂ ಇದೆ. ಅಣ್ಣಯ್ಯ ಇದೆಲ್ಲದರಿಂದ ನೊಂದುಕೊಳ್ಳಬಾರದು ಎಂಬ ಕಾರಣಕ್ಕೆ ಪಾರು ಶಿವು ಜತೆಯಲ್ಲೇ ಇರುತ್ತಿದ್ದಾಳೆ. ಅವಳಿಗೂ ತನ್ನ ಪ್ರೀತಿಯನ್ನು ಶಿವು ಬಳಿ ಹೇಳಿಕೊಳ್ಳುವ ಮನಸಾಗಿದೆ. ಆದರೆ ಧೈರ್ಯ ಸಾಲುತ್ತಿಲ್ಲ.

ಶಿವು ಹಿಂದಿಂದೇ ತಿರುಗಿ ಸಮಯ ಸಿಕ್ಕಾಗ ಅವನ ಬಳಿ ಹೇಳಿ ಬಿಡಬೇಕು ಎಂದು ಪಾರು ಅಂದುಕೊಂಡಿದ್ದಾಳೆ. ಅದೇ ಕಾರಣಕ್ಕೆ ಅವಳು ಶಿವು ಅಂಗಡಿಗೂ ಹೋಗಿದ್ದಾಳೆ. ಅಲ್ಲೇ ಕೆಲ ವಿಚಾರಗಳು ಪ್ರಸ್ತಾಪವಾಗುತ್ತವೆ. ಶಿವು ತನ್ನ ಇನ್ನುಳಿದ ತಂಗಿಯರ ಮದುವೆ ಬಗ್ಗೆ ಯೋಚಿಸುತ್ತಾ ಇರುತ್ತಾನೆ. ತಾನು ನಿನ್ನ ಜತೆಗಿದ್ದೇನೆ ಎಂದು ಪಾರು ಧೈರ್ಯ ತುಂಬುತ್ತಾಳೆ. ಆ ನಂತರದಲ್ಲಿ ನಾನೂ ನಿನ್ನ ಜತೆ ಅಂಗಡಿಗೆ ಬಂದು ಕೆಲಸ...