Bengaluru, ಮಾರ್ಚ್ 13 -- Annayya Serial: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಅಣ್ಣಯ್ಯ ಸೀರಿಯಲ್‌ ಕಿರುತೆರೆ ವೀಕ್ಷಕರ ಮನಸೆಳೆದಿದೆ. ಮುಗ್ದ ಶಿವು, ಚೆಂದದ ಪಾರು ಜೋಡಿಯ ಕಥೆ, ಮನೆ ಮಂದಿಗೆ ಇಷ್ಟವಾಗಿದೆ. ಟಿಆರ್‌ಪಿಯಲ್ಲಿಯೂ ಮುಂದಡಿ ಇರಿಸುತ್ತಿರುವ ಈ ಸೀರಿಯಲ್‌, ಎಂಟನೇ ವಾರದ ಟಿಆರ್‌ಪಿ ರೇಟಿಂಗ್‌ ಲೆಕ್ಕಾಚಾರದಲ್ಲಿ ಅಣ್ಣಯ್ಯ ಸೀರಿಯಲ್‌ 8.4 ಟಿಆರ್‌ಪಿ ಪಡೆದು ನಂಬರ್‌ 1 ಸೀರಿಯಲ್‌ ಆಗಿ ಹೊರಹೊಮ್ಮಿದೆ. ಇದೀಗ ಇದೇ ಸೀರಿಯಲ್‌ನ ಹೊಸ ಪ್ರೋಮೋ ಬಿಡುಗಡೆ ಆಗಿದೆ. ಶಿವು ಪಾರು ಜೋಡಿಯ ಪ್ರೇಮಾರಂಭವಾಗಿದೆ.

ಅಣ್ಣಯ್ಯ ಸೀರಿಯಲ್‌ ಗಟ್ಟಿ ಕಥೆಯ ಜತೆಗೆ ವೀಕ್ಷಕ ಬಯಸುವ ಅಂಶಗಳನ್ನು ಒಳಗೊಂಡಿದೆ. ಗ್ರಾಮ್ಯ ಸೊಗಡಿನ ಭಾಷೆ, ಒಬ್ಬ ಅಣ್ಣ ಆತನಿಗೆ ನಾಲ್ವರು ತಂಗಿಯಂದಿರು. ಬಾಲ್ಯದ ಪ್ರೀತಿ, ಊರ ಜನರ ಜತೆಗಿನ ಬಾಂಧವ್ಯ, ಅತ್ಯಾಪ್ತರೆನಿಸಿಕೊಂಡರ ಸೇಡು.. ಹೀಗೆ ಒಂದಷ್ಟು ವಿಚಾರಕ್ಕೆ ಅಣ್ಣಯ್ಯ ಸೀರಿಯಲ್‌ ಕಿರುತೆರೆ ವೀಕ್ಷಕರಿಗೆ ಹತ್ತಿರವಾಗಿದೆ. ಅಣ್ಣಯ್ಯನಾಗಿ ವಿಕಾಶ್‌ ಉತ್ತಯ್ಯ, ಪಾರ್ವತಿಯಾಗಿ ನಿಶಾ ರವಿಕೃಷ್ಣನ್‌ ಗಮನಸೆಳೆ...