ಭಾರತ, ಮಾರ್ಚ್ 28 -- ಅಣ್ಣಯ್ಯ ಧಾರಾವಾಹಿಯಲ್ಲಿ ಶಿವು ಹಾಗೂ ಪಾರು ಇಬ್ಬರು ಮದುವೆ ಆಗಿದ್ದಾರೆ. ಆದರೆ ಪಾರು ಸಂಪೂರ್ಣವಾಗಿ ಶಿವು ಪಾಲಾಗಿಲ್ಲ. ಶಿವು, ಪಾರುಗೆ ತಾನು ಇಷ್ಟ ಇಲ್ಲ ಎಂದು ಅಂದುಕೊಂಡು ಸುಮ್ಮನಾಗಿದ್ದಾನೆ. ಪಾರು ಎಷ್ಟು ಪ್ರೀತಿ ಮಾಡುತ್ತಿದ್ದಾಳೆ ಎಂಬ ಸತ್ಯ ಶಿವುಗೆ ಗೊತ್ತಾದರೆ ಅವನಷ್ಟು ಖುಷಿ ಪಡುವವರು ಈ ಭೂಮಿ ಮೇಲೆ ಇರೋದಿಲ್ಲ ಎನ್ನುವಷ್ಟರ ಮಟ್ಟಿಗೆ ಅವನು ಸಂತೋಷಪಡುತ್ತಾನೆ. ಆದರೆ ಪಾರು ಮೇಲೆ ಅವಳ ಪ್ರೀತಿಯ ಮೇಲೆ ಶಿವುಗೆ ನಂಬಿಕೆ ಇಲ್ಲ. ಅವಳು ತನ್ನನ್ನು ಪ್ರೀತಿಸಬಹುದು ಎಂಬ ಅಂದಾಜು ಸಹ ಅವನಿಗಿಲ್ಲ.

ಶಿವು ಹಾಗೂ ಪಾರು ಇಬ್ಬರನ್ನೂ ಒಂದು ಮಾಡಬೇಕು ಎಂದು ಶಿವಣ್ಣನ ತಂಗಿಯರು ಪ್ರಯತ್ನ ಪಡುತ್ತಾರೆ. ಬೇಕು ಎಂದೇ ಪಾರುಗೆ ಕೋಪ ಬರುವ ರೀತಿ ನಡೆದುಕೊಳ್ಳುತ್ತಾರೆ. ಶಿವುನೇ ನನ್ನ ಗಂಡ ಅವನನ್ನು ನನ್ನಿಂದ ದೂರ ಮಾಡೋಕೆ ಯಾರಿಂದಲೂ ಆಗೋದಿಲ್ಲ ಎಂದು ಅವಳ ಬಾಯಲ್ಲಿ ಹೇಳಿಸುತ್ತಾರೆ. ನಂತರ ತಾನು ಶಿವು ಮಾವನ ಬಳಿ ತನ್ನ ಪ್ರೀತಿಯನ್ನು ಹೇಳಿಕೊಳ್ಳಬೇಕು ಎಂದು ಪಾರುಗೆ ಬಲವಾಗಿ ಅನಿಸುವಂತೆ ಮಾಡುತ್ತಾರೆ. ಶಿವುಗಾಗಿ...